ಬೆಳಗಾವಿ:-ಪ್ರಯಾಗರಾಜ್ ನ ಮಹಾ ಕುಂಬಮೇಳದ ಕಾಲ್ತುಳಿತ ದುರಂತದಲ್ಲಿ ಬೆಳಗಾವಿಯ ತಾಯಿ,ಮಗಳು ಮೃತಪಟ್ಟಿದ್ದಾರೆ.ಜ್ಯೋತಿ ಹತ್ತರವಾಠ.. ಹಾಗೂ ಮೇಘಾ ಹತ್ತರವಾಠ ಮೃತಪಟ್ಟಿದ್ದಾರೆ.
ಅಮವಾಸಿ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಕೋಟ್ಯಂತರ ಜನ ತೆರಳಿದ್ದಾರೆ.ಮುಂಜಾನೆ ನದಿಯಲ್ಲಿ ಸ್ನಾನ ಮಾಡುವಾಗ ಕಾಲ್ತುಳಿತ ಸಂಭವಿಸಿ ಹಲವರು ಗಾಯಗೊಂಡಿದ್ದರು.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅದರಲ್ಲಿ ಬೆಳಗಾವಿ ಜಿಲ್ಲೆಯ ವಡಗಾವಿ ನಿವಾಸಿಗಳಾದ ತಾಯಿ ಮತ್ತು ಮಗಳು ಸಾವನ್ನಪ್ಪಿದ್ದಾರೆ.
ಬೆಳಗಾವಿಯಿಂದ ಸುಮಾರು 60 ಕ್ಕೂ ಹೆಚ್ಚು ಜನ ಕುಂಬ ಮೇಳಕ್ಕೆ ತೆರಳಿದ್ದರು.ಸಾಯಿರಥ ಟ್ರಾವಲ್ಸ್ ಮೂಲಕ ಇವರೆಲ್ಲಾ ಮೂರು ದಿನದ ಹಿಂದೆ ಕುಂಬ ಮೇಳಕ್ಕೆ ಪ್ರಯಾಣ ಬೆಳೆಸಿದ್ದರು.