ಕ್ರಿಕೆಟ್ ಬುಕ್ಕಿಯೊಬ್ಬನ ಬುಕ್ಕಿಂಗ್ ಕಥೆ..ಆ ಕೊಪ್ಪಿಕರ ರಸ್ತೆಯ ಜೀನ್ಸ್ ಶಾಪ್..”ಶ” ಹೋದರ..”ಸ”…ನ ..”161″
ಹುಬ್ಬಳ್ಳಿ:-ಹೌದು ಇಡೀ ಹುಬ್ಬಳ್ಳಿ-ಧಾರವಾಡದಲ್ಲಿಯೇ ಅದಕ್ಕೆ ಹೆಸರಾದ ಆ ಪೋಲೀಸ ಠಾಣೆಯೊಂದರ ಕ್ರೈಂ ಸಿಬ್ಬಂದಿಗಳಿಬ್ಬರು ದೊಡ್ಡ ಕ್ರಿಕೆಟ್ ಬುಕ್ಕಿಯೊಬ್ಬನನ್ನು ಕಳೆದ ಶನಿವಾರ ಎತ್ತಾಕ್ಕೊಂಡು ಬಂದ ಸುದ್ದಿ ಇಡೀ ಕೊಪ್ಪಿಕರ ರಸ್ತೆಯಲ್ಲಿ ಹರಿದಾಡುತ್ತಿದ್ದು ಮುಂದೇನಾಯ್ತು ಅನ್ನೋದು ಪ್ರಶ್ನಾರ್ಥಕವಾಗಿದೆ.
ಆ ಠಾಣೆಯ ಇಬ್ಬರು ಪವರ್ ಪುಲ್ ಕ್ರೈಂ ಸಿಬ್ಬಂದಿಗಳು ಒಂದು ಗುಡುಗು ಹಾಕಿದರೆ ಸಾಕು ಅಕ್ರಮ ದಂಧೆಕೋರರು ಅಣ್ಣಾ ಬಂದೆ ಅನ್ನೋ ಮಟ್ಟಿಗಿದ್ದಾರೆ ಅವರು.ಈಗ ಅವರೇ ಪ್ರತಿಷ್ಠಿತ ಜೀನ್ಸ್ ಅಂಗಡಿಯ ಶ..ನ ಸಹೋದರ ಸ..ನನ್ನು ಎತ್ತಾಕಿಕೊಂಡು ಬಂದ ಆ ಸಿಬ್ಬಂದಿಗಳು ಮಸ್ತ ಪ್ರಸಾದ ಪಡೆದು ಕಳಿಸಿದ್ದಾರಂತೆ.
ಆ ಪ್ರಸಾದ ಲೆಕ್ಕ ಕೇಳಿದರೆ ಅಬ್ಬಾ ಅಂತೀರಾ… ಮೇಲಿನವರದು ಇಷ್ಟು..? ಕೆಳಗಿನವರದು ಇಷ್ಟು..? ಮತ್ತ ಅದರಲ್ಲಿ ನಮ್ಮದೇನು ಇಲ್ಲಾ..ನಾವು ನೀವೂ ಬಹಳ ದಿನದಿಂದ ಪರಿಚಯಸ್ಥರು ಅಂತಾ ಬೊಗಳೆ ಬಿಟ್ಟು ಭರ್ಜರಿ ಪೇಡಾ ಪಡೆದು ಕೈ ಬಿಟ್ಟಿದ್ದಾರಂತೆ.ಮುಂದೈತಿ ಮಾರಿ ಹಬ್ಬ..