ಡೆಪಿಟೇಶನ್ ಅವದಿ ಮುಗಿದವರ ಲಿಸ್ಟ್ ನೋಡತಾರಾ ಹೊಸ ಕಮೀಷನರ್…ಇಲ್ಲಾ ಅವರೂ ಗಾಳಿಯಲ್ಲಿ ಗುಂಡು ಹಾರಿಸತಾರಾ…?
ಹುಬ್ಬಳ್ಳಿ:- ರಾಜ್ಯದ ಹತ್ತೂ ಮಹಾನಗರ ಪಾಲಿಕೆಗಳಲ್ಲಿ ನಿಯೋಜನೆ ಮೇಲೆ ಬೇರೇ ಬೇರೆ ಇಲಾಖೆಗಳಿಂದ ಬಂದ ಅವಧಿ ಮೀರಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅವರ ಮಾತೃ ಇಲಾಖೆಗೆ ಕೂಡಲೆ ಹಿಂದಿರುಗಿಸಬೇಕೆಂದು ನಗರಾಭಿವೃದ್ಧಿ ಇಲಾಖೆ 15/10/2024 ರಂದು ಎಲ್ಲಾ ಮಹಾನಗರ ಪಾಲಿಕೆಗಳಿಗೆ ಆದೇಶ ಮಾಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯೊಂದನ್ನು ಬಿಟ್ಟು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು ಸರಕಾರದ ಆದೇಶ ಆದ ಮೇಲೆ ಸರಕಾರದ ಆದೇಶದ ಅನ್ವಯ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅವಧಿ ಮೀರಿದವರನ್ನು ಮಾತೃ ಇಲಾಖೆಗೆ ಹಿಂದಿರುಗಿಸಿದ್ದಾರೆ.
ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮಾತ್ರ ನಿಯೋಜನೆಯ ಅವಧಿ ಮೀರಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸರಕಾರದ ಆದೇಶ ಆಗಿ ನಾಲ್ಕು ತಿಂಗಳು ಕಳೆದರೂ ರಿಲೀವ್ ಮಾಡಿಲ್ಲಾ.ಈಗ ಬಂದಂತಹ ಹೊಸ ಕಮೀಷನರ್ ಸಾಹೇಬ್ರು ಪುಲ್ ಆ್ಯಕ್ಟಿವ್ ಆಗಿ ಪೀಲ್ಡಿಗಿಳಿದಿದ್ದಾರೆ.ಅವರಾದರೂ ಡೆಪಿಟೇಶನ್ ಅವದಿ ಮೀರಿದವರನ್ನ ರಿಲೀವ್ ಮಾಡತಾರಾ..ಇಲ್ಲಾ ಅವರೂ ಗಾಳಿಯಲ್ಲಿ ಗುಂಡು ಹಾರಿಸತಾರಾ ಕಾದು ನೋಡಬೇಕಾಗಿದೆ..
ಪಾಲಿಕೆಗೆ ಸರಕಾರದ ಆದೇಶ ಅಂದರೆ ಕವಡೆ ಕಾಸಿನ ಕಿಮ್ಮತ್ತು ಅನ್ನೋ ತರಹ ನಡೆದುಕೊಳ್ಳುತ್ತಿದೆ.
ಸರಕಾರದ ಆದೇಶ ಪಾಲನೆ ಮಾಡದ ಮಹಾನಗರ ಪಾಲಿಕೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮೌನವಹಿಸಿದ್ದಾದರೂ ಏಕೆ ? ಅನ್ನೋ ಮಾತು ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು ಕೇಳುವಂತಾಗಿದೆ.ಈಗಲಾದರೂ ಸರಕಾರದ ಮಹತ್ವದ ಆದೇಶದ ಬಗ್ಗೆ ಗಮನಹರಿಸತಾರಾ ಸಚಿವ ಸಂತೋಷ ಲಾಡ್ ಸಾಹೇಬ್ರು ಕಾದು ನೋಡಬೇಕಾಗಿದೆ.