ಬೆಳ್ಳಂ ಬೆಳೆಗ್ಗೆ ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು…ನಟೋರಿಯಸ್ ಗ್ಯಾಂಗ್ ಮೇಲೆ ಗುಂಡಿನ ದಾಳಿ.
ಹುಬ್ಬಳ್ಳಿ:-ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರಿಂದ ನಟೋರಿಯಸ್ ಗ್ಯಾಂಗ್‌ನ ಇಬ್ಬರ ಕಾಲಿಗೆ ಗುಂಡು ಹೊಡೆದಿದ್ದಾರೆ.ಗುಂಡೇಟು ತಿಂದ ನೆಟೋರಿಯಸ್ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುಜರಾತ್ ಮೂಲದ ನಿಲೇಶ್ ಹಾಗೂ ದಿಲೀಪ್ ಗೆ ಗುಂಡೇಟು ಬಿದ್ದಿದ್ದು ಹುಬ್ಬಳ್ಳಿಯ ಬಿಡ್ನಾಳ ಸಮೀಪದಲ್ಲಿ ನಟೋರಿಯಸ್‌ಗಳ ಮೇಲೆ ಪೋಲೀಸರು ದಾಳಿ ಮಾಡಿದ್ದಾರೆ.ಐದು ಜನರ ಗುಂಪು ಕಟ್ಟಿಕೊಂಡು ಹುಬ್ಬಳ್ಳಿಗೆ ಬಂದಿದ್ದ ನಟೋರಿಯಸ್ ಗ್ಯಾಂಗ್ ಇದಾಗಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಐದು ಕಳ್ಳತನ ಪ್ರಕರಣದಲ್ಲಿ ಈ ಗ್ಯಾಂಗ್ ಭಾಗಿಯಾಗಿದೆ ಎನ್ನಲಾಗಿದೆ.ಆ ಹಿನ್ನೆಲೆಯಲ್ಲಿ ಗ್ಯಾಂಗ್ ಹಿಂದೆ ಬಿದ್ದಿದ್ದ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಫೈರಿಂಗ್ ಮಾಡಿದ್ದಾರೆ…
ಮನೆ ಕಳ್ಳತನ, ಹೊರವಲಯದಲ್ಲಿ ಬೈಕ್ ಅಡ್ಡಗಟ್ಟಿ ದರೋಡೆ ಮಾಡತಿದ್ದ ಗ್ಯಾಂಗ್ ಇದಾಗಿತ್ತು.ಅವರ ಬೆನ್ನು ಬಿದ್ದಿದ್ದ ಪೋಲೀಸರು ಈಗ ಹೆಡಮುರಿ ಕಟ್ಟಿದ್ದಾರೆ.ದಾಳಿ ವೇಳೆ ಪೋಲೀಸರ ಮೇಲೂ ನೆಟೋರಿಯಸ್ ಗ್ಯಾಂಗ್ ಅಟ್ಯಾಕ್ ಮಾಡಿದ ಹಿನ್ನೆಲೆಯಲ್ಲಿ ಪೋಲೀಸರಿಗೂ ಗಾಯಗಳಾಗಿದ್ದು ಅವರೂ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ.