ಅತ್ತು ಕರೆದು ಬಿಜೆಪಿ ಅದ್ಯಕ್ಷ ಸ್ಥಾನ ಪಡೆದಂತಿದೆ.ಮಾಜಿ ಸಿಎಂ ಜಗದೀಶ ಶೆಟ್ಟರ್.

Share to all

ಅತ್ತು ಕರೆದು ಬಿಜೆಪಿ ಅದ್ಯಕ್ಷ ಸ್ಥಾನ ಪಡೆದಂತಿದೆ.ಮಾಜಿ ಸಿಎಂ ಜಗದೀಶ ಶೆಟ್ಟರ್.

ಹುಬ್ಬಳ್ಳಿ:-ಇಷ್ಟು ದಿನ ಬಿಜೆಪಿಗೆ ಅದ್ಯಕ್ಷ ಸ್ಥಾನ ಮಾಡೋದನ್ನ ಬಿಟ್ಟು ಈಗ್ಯಾಕ ಮಾಡಿದರು.ಅತ್ತು ಕರೆದು ಅದ್ಯಕ್ಷ ಸ್ಥಾನ ಪಡೆದುಕೊಂಡಂತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಕಳೆದ ಆರು ತಿಂಗಳಿಂದ ಬಿಜೆಪಿ ನಾಯಕನ ಆಯ್ಕೆ ಮಾಡಿರಲಿಲ್ಲ.ಇವಗ್ಯಾಕೆ ಆಯ್ಕೆ ಮಾಡಿದ್ರು,ರಾಜಕೀಯ ಪಕ್ಷ ಆಗಿ ತಕ್ಷಣವೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕಿತ್ತು.ಬಿಜೆಪಿ ಫೇಲ್ ಆಗಿದೆ.

ಲಿಂಗಾಯತ ನಾಯಕರಿಗೆ ಮಣೆ ಹಾಕಿರೋ ವಿಚಾರ….
ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ.ಅಂತೂ ಆರು ತಿಂಗಳ ಮೇಲೆ ಅಧ್ಯಕ್ಷರನ್ನು ಮಾಡಿದರು..ನಾನು ಕಾಂಗ್ರೆಸ್ ನಲ್ಲಿ ಇದ್ದಿನಿ ಅಧ್ಯಕ್ಷರ ಆಯ್ಕೆ ಅವರ ಪಕ್ಷಕ್ಕೆ ಬಿಟ್ಟ ವಿಚಾರ.
ಕಾಂಗ್ರೆಸ್ 136 ಸ್ಥಾನ ಬಂದು ಬಲಾಢ್ಯವಾಗಿ ಬೆಳೆದಿದೆ. ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದ ಶೆಟ್ಟರ್.
ಬಹಳ ದಿನಗಳ ನಂತರ ರಾಜ್ಯಧ್ಯಕ್ಷರನ್ನು ಮಾಡಿದ್ದಾರೆ.
ಬಿಜೆಪಿ ಸಾಕಷ್ಟುಭ್ರಮೆಯಲ್ಲಿದ್ದಾರೆ.
ಈಗಾಗಲೇ ಬೇರೆ ಕಡೆ ಆಪರೇಷನ್ ಕಮಲ ಮಾಡಲು ಹೋಗಿ ಕೈಸುಟ್ಟುಕೊಂಡಿದ್ದಾರೆ.

50 ರಿಂದ 60 ಶಾಸಕರನ್ನು ಕರೆದುಕೊಂಡು ಬಂದು ಮತ್ತೆ ಸರ್ಕಾರ ರಚನೆ ಭ್ರಮೆಯಲ್ಲಿದ್ದಾರೆ.
ಈಗ ಸಿದ್ದರಾಮಯ್ಯ ಮುಖ್ಯ ಮಂತ್ರಿ ಇದ್ದಾರೆ..
ಪವರ್ ಶೇರಿಂಗ್ ಬಗ್ಗೆ ಯಾರೋ ಮಾತನಾಡುತ್ತಾರೆ ಚರ್ಚೆ ಮಾಡುವುದು ಸರಿಯಲ್ಲಾ.ಅದು ಬರೀ ಚರ್ಚೆ ಆಗುತ್ತೆ..ಪಂಚ ರಾಜ್ಯದ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಇರುತ್ತದೆ ಎಂದ ಶೆಟ್ಟರ್ ಹೇಳಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author