ನಿನ್ನೆ ಅವರ ಹೆಸರು. ಇಂದು ಇವರ ಹೆಸರು.. 50 ಕೋಟಿ ಬೆಲೆ ಬಾಳುವ ಆಸ್ತಿ ಕಬ್ಜಾ ಮಾಡಿದ ಕಾಂಗ್ರೆಸ್ ಮುಖಂಡರು..
ಹುಬ್ಬಳ್ಳಿ:- ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ವಿವಾದಿತ ಜಾಗ ಈಗ ಬೆಳ್ಳಂ ಬೆಳೆಗ್ಗೆ ಕಾಂಗ್ರೆಸ್ ಪಕ್ಷದ ಕಛೇರಿಯಾಗಿ ಮಾರ್ಪಟ್ಟಿದೆ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಜಾಗವನ್ನು ವಶಕ್ಕೆ ಪಡೆದು ಕಾಂಗ್ರೆಸ್ ಪಕ್ಷದ ಬೋಡ್೯ ಹಾಗೂ ಕಾಂಗ್ರೆಸ್ ನಾಯಕರ ಪೋಟೋ ಇಟ್ಟು ಪೂಜೆ ಸಲ್ಲಿಸಿದ್ದಾರೆ.
50 ಕೋಟಿಗೂ ಅಧಿಕ ಬೆಲೆ ಬಾಳುವ ವಿವಾದಿತ ಜಾಗ ಈ ಮೊದಲು 1959 ರಲ್ಲಿ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಸೇಲ್ ಡೀಡ್ ಆಗಿತ್ತು.ನಂತರ ದಿವಂಗತ ಎಸ್.ಆರ್ ಬೊಮ್ಮಾಯಿ ಕಾಲದಲ್ಲಿ ಜೆಡಿಯು ಕಛೇರಿಯಾಗಿ ಮಾರ್ಪಾಡಾಗಿತ್ತು.
ಇತ್ತೀಚೆಗೆ ಪಹಣಿಯಲ್ಲಿ ಕಾಂಗ್ರೆಸ್ ಪಕ್ಷದ ಹೆಸರನ್ನು ನಮೂದಿಸಿಕೊಂಡಿರುವ ಕೈ ಪಕ್ಷದ ನಾಯಕರು ಈಗ ಆ ಜಾಗವನ್ನು ವಶಕ್ಕೆ ಪಡೆದು ಕಾಂಗ್ರೆಸ್ ಸಮಿತಿ ಬೋಡ್೯ ಹಾಕಿ ಪೂಜೆ ಸಲ್ಲಿಸಿದ್ದಾರೆ.