ನೂತನ BJP ರಾಜ್ಯಾಧ್ಯಕ್ಷರಿಗೆ ಅಭಿನಂದಿಸಿದ ಅನುಪ ಬಿಜವಾಡ – ಬೆಂಬಲಿಗರೊಂದಿಗೆ ಭೇಟಿಯಾಗಿ ಶುಭ ಕೋರಿ ಅಭಿನಂದನೆ ಸಲ್ಲಿಸಿದ ಯುವ ನಾಯಕ ಅನುಪ ಬೀಜವಾಡ ಮತ್ತು ಟೀಮ್
ಬೆಂಗಳೂರು –
ರಾಜ್ಯ ಬಿಜೆಪಿ ಘಟಕಕ್ಕೆ ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಬಿ ವೈ ವಿಜಯೇಂದ್ರ ಅವರನ್ನು ಹುಬ್ಬಳ್ಳಿಯ ಬಿಜೆಪಿ ಪಕ್ಷದ ಯುವ ಮುಖಂಡ ಅನುಪ ಬಿಜವಾಡ ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಹೌದು ಬೆಂಗಳೂರಿನಲ್ಲಿ ನೂತನ ಬಿಜೆಪಿ ರಾಜ್ಯಾದ್ಯಕ್ಷರನ್ನು ಬೆಂಬಲಿಗರೊಂದಿಗೆ ಭೇಟಿಯಾದ ಅನುಪ ಬಿಜವಾಡ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.ರಾಜ್ಯ ಬಿಜೆಪಿಗೆ ನಿನ್ನೆಯಷ್ಟೇ ನೂತವಾಗಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಹೈಕಮಾಂಡ್ ನೇಮಕ ಮಾಡಿದ್ದು ಹೀಗಾಗಿ ಇವರನ್ನು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅನುಪ ಬಿಜವಾಡ ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದರು.ಮಾಜಿ ಸಿಎಂ ಯಡಿಯೂರಪ್ಪನವರೊಂದಿಗೆ ನಿಖಟ ಬಾಂಧವ್ಯ ಹೊಂದಿರುವ ಬಿಜವಾಡ ಕುಟುಂಬದವರು ಅದರಲ್ಲೂ ಅನುಪ ಬಿಜವಾಡ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿಯಲು ಟಿಕೆಟ್ ಆಕಾಂಕ್ಷಿಯಾಗಿದ್ದರು.
ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನವನ್ನು ಒಳ್ಳೆಯ ಸಂಘಟಕ,ವಾಗ್ಮಿ ಯುವ ಮುಖಂಡನಿಗೆ ಕೊಟ್ಟಿದ್ದು ಖುಷಿ ಕೊಟ್ಟಿದೆ. ನಮ್ಮಂತಹ ಯುವಕರು ಪಕ್ಷ ಸಂಘಟನೆಯಲ್ಲಿ ಇನ್ನೂ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ಅನುಕೂಲವಾಗುತ್ತೆ ಎಂದು ಅನುಪ ಬಿಜವಾಡ ಹೇಳಿ ರಾಜ್ಯ ಬಿಜೆಪಿ ಘಟಕದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ವಿಜಯೇಂದ್ರ ಅವರಿಗೆ ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಅನುಪ ಬಿಜವಾಡ ಅವರೊಂದಿಗೆ ಕರಿಯಪ್ಪ ಗುಡಿಹಾಳಸ,ಸಂದೀಪ ಶಿರಸಂಗಿ,ಜಗನ್ನಾಥ ಪವಾರ,ಶರಣು ಅಂಗಡಿ,ಶಂಕರ,ಬಾಬು ಪಾಟೀಲ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉದಯ ವಾರ್ತೆ ಬೆಂಗಳೂರು