ನಿರುದ್ಯೋಗಿಗಳಿಗೆ “ಉದ್ಯೋಗ”- ಎಸ್.ಪಿ.ಫೌಂಡೇಶನ್ ಅಮೋಘ ಕಾರ್ಯ
ನವಲಗುಂದ: ಸಣ್ಣಪುಟ್ಟ ಸಹಾಯ ಮಾಡುವ ಜೊತೆಗೆ ಜೀವನದುದ್ದಕ್ಕೂ ಬದುಕು ಕಟ್ಟಿಕೊಳ್ಳಲು ನೌಕರಿ ಕೊಡಿಸುತ್ತಿರುವ ಎಸ್.ಪಿ.ಫೌಂಡೇಶನ್ ಕಾರ್ಯ ಅಮೋಘ ಎಂದು ಅಣ್ಣಿಗೇರಿಯ ದಾಸೋಹ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ನುಡಿದರು.
ನವಲಗುಂದ ಮಾಡೆಲ್ ಹೈಸ್ಕೂಲಿನಲ್ಲಿ ಎಸ್.ಪಿ.ಫೌಂಡೇಶನ್ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ನಿರುದ್ಯೋಗಿಗಳೇ ಇಲ್ಲದಂತೆ ಮಾಡಲು ಹೊರಟಿರುವ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಮಾತನಾಡಿ, ನಾವಿರುವ ನೆಲದ ಋಣ ತೀರಿಸಲು ಸದಾಕಾಲ ಫೌಂಡೇಶನ್ ಜೊತೆಗೂಡಿ, ಕೆಲಸ ಮಾಡುತ್ತೇನೆ. ಕ್ಷೇತ್ರದ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವ ಜೊತೆಗೆ ರೈತಪರ, ಆರೋಗ್ಯದ ಜೊತೆಗೆ ಶಿಕ್ಷಣಕ್ಕೆ ಆಧ್ಯತೆ ಕೊಡಲು ಫೌಂಡೇಶನ್ ಮುಂದಾಗಬೇಕೆಂದು ಹೇಳಿದರು.
ಉದ್ಯೋಗ ಮೇಳವನ್ನ ನವಲಗುಂದ ಗವಿಮಠದ ಅಭಿನವ ಶ್ರೀ ಬಸವಲಿಂಗ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.