ನನ್ನ ಕಾಲ್ ರೆಕಾಡ್೯ ಏನ್ ತೆಗೀತೀರಿ..ನಿಮ್ಮ ರೆಕಾರ್ಡ್ ಮೊದಲು ನೋಡಿ..ಅಬ್ಬಯ್ಯ ಗರಂ..
ಹುಬ್ಬಳ್ಳಿ:- ಹುಬ್ಬಳ್ಳಿಯಲ್ಲಿ ನಡೆದ ಚಿಣ್ಣರ ಅನ್ನಕ್ಕೆ ಕನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ಬಿಜವಾಡ ಅಂತಾ ಅವರು ನನ್ನ ಕಾಲ್ ರೆಕಾಡ್೯ ತೆಗೀಸಿ ಅಂದಿದ್ದಾರೆ.ಮೊದಲು ನಿಮ್ಮ ರೆಕಾಡ್೯ ಏನು ಅಂತಾ ಮೊದಲು ನೋಡಿ ಅಂತಾ ಶಾಸಕ ಪ್ರಸಾದ ಅಬ್ಬಯ್ಯ ಅನೂಪ ಬಿಜವಾಡ ಹಾಗೂ ಶಶಿ ಬಿಜವಾಡ ವಿರುದ್ದ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ ಮಕ್ಕಳು ತಿನ್ನೋ ಅನ್ನ ಪ್ರಕರಣದಲ್ಲಿ ನನ್ನ ಕುಟುಂಬದ ಸದಸ್ಯರು ಭಾಗಿಯಾಗಿದ್ದರು ಬಿಡೋ ಪ್ರಶ್ನೆ ಇಲ್ಲಾ..ನನ್ನ ಕಾಲ್ ರೆಕಾಡ್೯ ಏನ್ ತೆಗೀತೀರಿ ನಿಮ್ಮ ಕಾಲ್ ರೆಕಾಡ್೯ ನೋಡಿ ನಿಮ್ಮ ಹಿಸ್ಟರಿ ಹುಬ್ಬಳ್ಳಿ-ಧಾರವಾಡ ಜನರಿಗೆ ಗೊತ್ತಿದೆ. ನಾಚಿಕೆಯಾಗಬೇಕು ನಿಮಗೆ ಅಂತಾ ಹೇಳಿದ್ದಾರೆ.