ಚಿಣ್ಣರ ಅನ್ನಕ್ಕೆ ಕನ್ನ ಪ್ರಕರಣ ಇಬ್ಬರು ಪೋಲೀಸರ ತಲೆದಂಡ.ವಾಲಿಕಾರ ಗೋಣೆಪ್ಪನವರ ಸಸ್ಪೆಂಡ್..
ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಮಕ್ಕಳು ಹಾಗೂ ಬಾಣಂತಿಯರ ತಿನ್ನೋ ಅನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾ ಪೋಲೀಸ ಠಾಣೆಯ ಇಬ್ಬರು ಪೋಲೀಸರ ತಲೆದಂಡವಾಗಿದೆ.
ಕರ್ತವ್ಯ ಲೋಪ ಮತ್ತು ಗುಪ್ತ ಮಾಹಿತಿ ಸಂಗ್ರಹ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಕಸಬಾ ಪೋಲೀಸ ಠಾಣೆಯ ಮಾಬುಸಾಬ ವಾಲಿಕಾರ ಮತ್ತು ಗೋಣೆಪ್ಪನವರ ಎಂಬ ಇಬ್ಬರು ಪೋಲೀಸರನ್ನು ಸಸ್ಪೆಂಡ ಮಾಡಿ ಪೋಲೀಸ ಕಮೀಷನರ್ ಎನ್ ಶಶಿಕುಮಾರ ಆದೇಶ ಹೊರಡಿಸಿದ್ದಾರೆ.
ಈ ಚಿಣ್ಣರ ಅನ್ನಕ್ಕೆ ಕನ್ನ ಪ್ರಕರಣದಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರನ್ನೋ ಹೊಣೆಗಾರರನ್ನಾಗಿ ಮಾಡಿದರಾ ಪೋಲೀಸ ಕಮೀಷನರ್ ಅನ್ನೋ ಮಾತುಗಳು ಕೇಳಿ ಬರುತ್ತಿವೆ.