ಕರವೇ ಕಾರ್ಯಕರ್ತ ಈಗ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ.. ಪವನ ಪರಶುರಾಮ ಬಿಜವಾಡಗೆ ನೇಮಕಾತಿ ಪತ್ರ ನೀಡಿದ ಶಾಸಕ ಪ್ರಸಾದ ಅಬ್ಬಯ್ಯ.
ಹುಬ್ಬಳ್ಳಿ:- ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ )ಯಲ್ಲಿ ನಾಡು..ನುಡಿ..ಜಲ..ವಿಚಾರದಲ್ಲಿ ಮುಖಂಡ ಮಂಜುನಾಥ ಲೂತಿಮಠ ಅವರೊಂದಿಗೆ ಹೋರಾಟ ಮಾಡಿದ್ದ ಪವನ ಪರಶುರಾಮ ಬಿಜವಾಡ ಅವರನ್ನು ಬಮ್ಮಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಶಾಸಕ ಪ್ರಸಾದ್ ಅಬ್ಬಯ್ಯ ಪವನ ಬಿಜವಾಡ ಅವರಿಗೆ ಬಮ್ಮಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಂತಾ ನೇಮಕ ಮಾಡಿದ ಆದೇಶ ಪತ್ರ ನೀಡಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಒತ್ತು ನೀಡಲು ಸಲಹೆ ನೀಡಿ ಶುಭ ಕೋರಿದರು.