ಧಾರವಾಡ:- ಹೌದು ಧಾರವಾಡದ ಎಪಿಎಂಸಿ ಬಳಿ ಓಡಾಡುತ್ತಿದ್ದ ಬುದ್ಧಿಮಾಂದ್ಯನೊಬ್ಬನನ್ನು ಯುವಕರ ಗುಂಪೊಂದು ಕಲ್ಲಿನಿಂದ ಹೊಡೆದು ಉಸಿರು ನಿಲ್ಲಿಸಿದ ಘಟನೆ ಧಾರವಾಡ ಉಪನಗರ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಧಾರವಾಡದ ಎಪಿಎಂಸಿ ಬಳಿ ಓಡಾಡುತ್ತಿದ್ದ ಇನ್ಯಾಸ್ ಜಲೀಲ್ ಸಾಬ ಮಕಾಂದರ ವಯಸ್ಸು 48 ಅವರನ್ನು ಗಮನಿಸಿದ ಯುವಕರ ಗುಂಪೊಂದು ಬುದ್ದಿ ಮಾಂದ್ಯನಿಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ.ಇದಾದ ನಂತರ ಸ್ಥಳೀಯರು ಗಾಯಗೊಂಡಿದ್ದ ವ್ಯಕ್ತಿಯನ್ನು ಗಮನಿಸಿ ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರಾರೂ ಚಿಕಿತ್ಸೆ ಫಲಿಸದೇ ಬುದ್ದಿ ಮಾಂದ್ಯ ಸಾವನ್ನಪ್ಪಿದ್ದಾನೆ.
ಆಸ್ಪತ್ರೆಗೆ ಭೇಟಿ ನೀಡಿದ ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಎನ್.ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.