ಬಿಜೆಪಿಗೆ ಸೆಡ್ಡು ಹೊಡೆದ ಹಿಂದೂ ಹುಲಿ..ಬರುವ ವಿಜಯದಶಮಿಗೆ ಹೊಸ ಪಾರ್ಟಿ..
ವಿಜಯಪುರ:- ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟನೆ ಮಾಡಿದ ನಂತರ ಈಗ ಹಿಂದೂ ಪೈರ್ ಬ್ರ್ಯಾಂಡ್ ಯತ್ನಾಳ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ..
ವಿಜಯಪುರದಲ್ಲಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ ರಾಜ್ಯದಲ್ಲಿ ಹಿಂದುಗಳ ಪಕ್ಷ ಅಗತ್ಯವಿದೆ ಆ ನಿಟ್ಟಿನಲ್ಲಿ ಬರುವ ವಿಜಯದಶಮಿಗೆ ಹಿಂದುಗಳ ಹೊಸ ಪಕ್ಷ ಉದಯವಾಗಲಿದೆ ಎಂಬ ಸಂದೇಶವನ್ನು ನೀಡಿದ್ದಾರೆ.
ಇಂದು ಯುಗಾದಿ ದಿನವೇ ಹೊಸ ಪಕ್ಷದ ಸುಳಿವು ನೀಡಿರುವ ಯತ್ನಾಳ ಉಚ್ಚಾಟನೆ ಹಿಂಪಡೆಯದಿದ್ದರೆ ಹೊಸ ಪಕ್ಷ ಗ್ಯಾರಂಟಿ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡಗೆ ನೀಡಿದ್ದಾರೆ.