ಹುಬ್ಬಳ್ಳಿ:- ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ತಿರುಮಲಕೊಪ್ಪ ಗ್ರಾಮದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಠದಲ್ಲಿ ಹಲವು ಮಕ್ಕಳಿಗೆ ಶಿವದೀಕ್ಷೆ ಅಯ್ಯಾಚಾರ ನಡೆಸಲಾಯಿತು.
ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಜಗದ್ಗುರು ರೇಣುಕಾಚಾರ್ಯರರ ಜಯಂತಿ ಅಂಗವಾಗಿ ಮಹಾ ರಥೋತ್ಸವ ಹಾಗೂ 45 ಕ್ಕೂ ಹೆಚ್ಚು ವಟುಗಳಿಗೆ ಶಿವದೀಕ್ಷೆ ಅಯ್ಯಾಚಾರ ನಡೆಸಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಸುಳ್ಳ ಗ್ರಾಮದ ಪಂಚಗ್ರಹ ಹಿರೇಮಠದ ಶಿವಶಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು..ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು..ಹಾಗೂ ದಾನಯ್ಯ ದೇವರು ಸೇರಿದಂತೆ ಹಲವು ಸ್ವಾಮಿಗಳು ಉಪಸ್ಥಿತರಿದ್ದರು.