ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಇಂದು ರಾಮನವಮಿ ಪ್ರಯುಕ್ತ ಜರುಗಿದ ಶೋಭಾ ಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಸ್ಟೆಪ್ ಹಾಕಿ ಸಂಭ್ರಮಿಸಿದರು.
ಭಾನುವಾರ ರಾತ್ರಿ ನಡೆದ ಭವ್ಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ ಸಚಿವರು, ಶ್ರೀರಾಮನ ಭಜನೆಯೊಂದಿಗೆ ಸ್ಟೆಪ್ ಹಾಕಿ ಕಾರ್ಯಕರ್ತರನ್ನು ಹುರುದುಂಬಿಸಿದರು.
ಶೋಭಯಾತ್ರೆಯಲ್ಲಿ ಸೇರಿದ್ದ ಸಾವಿರಾರು ಹಿಂದೂ ಕಾರ್ಯಕರ್ತರ ಉತ್ಸಾಹಕ್ಕೆ ಮೆರುಗು ನೀಡಿದರು. ಇದೇ ವೇಳೆ ಸಚಿವರು ಶ್ರೀರಾಮನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.
ಶನಿವಾರ ಮಧ್ಯಾಹ್ನದ ವೇಳೆಗೆ ನಗರಕ್ಕೆ ಆಗಮಿಸಿದ್ದ ಸಚಿವರು ಬಂದ ಕ್ಷಣದಿಂದಲೂ ಭಾನುವಾರ ರಾತ್ರಿವರೆಗೂ ಬಿಡುವಿಲ್ಲದ ಒಂದಿಲ್ಲೊಂದು ಸಭೆ, ಸಮಾರಂಭಗಳಲ್ಲಿ ತೊಡಗಿದ್ದರು. ರಾಮನವಮಿ ಪ್ರಯುಕ್ತ ಭಾನುವಾರ ರಾತ್ರಿ ಆಯೋಜಿಸಿದ್ದ ಶೋಭಾಯಾತ್ರೆ ದಣಿದ ಸಚಿವರ ಮನಸ್ಸಿಗೆ ಮುದ ನೀಡಿತು. ಶ್ರೀರಾಮ, ಹನುಮನ ಭಜನೆ, ಹಾಡುಗಳು, ಕಾರ್ಯಕರ್ತರ ಅತ್ಯುತ್ಸಾಹ ಸಚಿವರ ಮನಸ್ಸಿಗೂ ಉಲ್ಲಾಸ, ಹೊಸ ಉತ್ಸಾಹ ತುಂಬಿತು. ಸಚಿವ ಜೋಶಿ ಅವರೂ ದಣಿವೆಲ್ಲಾ ಮರೆತು ಹಾಯಾಗಿ ರಾಮ ಭಜನೆ ಹಾಡುತ್ತಾ ಸಾಗಿದರು. ಕಾರ್ಯಕರ್ತರೊಂದಿಗೆ ಬೆರೆತು ನೃತ್ಯಿಸಿ ಸಂಭ್ರಮಿಸಿದರು.