ಹುಬ್ಬಳ್ಳಿ:-ಯಾವುದೇ ಬಿಲ್ ಇಲ್ಲದೇ ಸಾಗಾಟ ಮಾಡುತ್ತಿದ್ದ ತಿನ್ನರ ಬ್ಯಾರಲ್ ಗಳನ್ನು ಹುಬ್ಬಳ್ಳಿಯ ಸಿಸಿಬಿ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಬಾಂಬೆಯಿಂದ ಗದಗ ಕಡೆ ಹೊರಟಿದ್ದ ಎರಡು ಕ್ಯಾಂಟರ್ ವಾಹನಗಳನ್ನು ಸಂಶಯದ ಮೇರೆಗೆ ಸಿಸಿಬಿ ಪೋಲೀಸರು ತಪಾಸಣೆ ನಡೆಸಿದಾಗ ಆ ಎರಡೂ ವಾಹನಗಳಲ್ಲಿ ಯಾವುದೇ ಬಿಲ್ಲ್ ಇಲ್ಲದೇ ಸಾಗಾಟ ಮಾಡುತ್ತಿದ್ದ 29 ಬ್ಯಾರಲ್ ತಿನ್ನರ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ.
ಬೈಂದೂರ ತಾಲೂಕಿನ ಶಿರೂರು ಗ್ರಾಮದವರು ಎನ್ನಲಾದ ನಬೀಸಾಬ ಮತ್ತು ನಯೀಮ ಎಂಬುವರನ್ನು ವಶಕ್ಕೆ ಪಡೆದ ಸಿಸಿಬಿ ಪೋಲೀಸರು ಹಳೇಹುಬ್ಬಳ್ಳಿ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.