2 ಡಿ 2ಸಿ ವಿಚಾರದಲ್ಲಿ ಬಹುದೊಡ್ಡ ಡೀಲ್.ಗುರುಗಳ ವಿರುದ್ದ ಬಾಂಬ್ ಸಿಡಿಸಿದ ವಿಜಯಾನಂದ..
ಹುಬ್ಬಳ್ಳಿ:-ಜಯಮೃತ್ಯುಂಜಯ ಸ್ವಾಮೀಜಿಗಳ ನಡೆಯನ್ನ ಲಿಂಗಾಯತ ಪಂಚಮಸಾಲಿಸಮಾಜ ಒಪ್ಪಲ್ಲ ಅವರು ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಬಹು ದೊಡ್ಡ ಡೀಲ್ ಮಾಡಿಕೊಂಡಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಸ್ವಾಮೀಜಿಗಳು ಸಮಾಜದಹಿತದೃಷ್ಠಿಗಾಗಿ ಹೋರಾಟ ಮಾಡುತ್ತಿಲ್ಲ.
ಒಬ್ಬ ವ್ಯಕ್ತಿಯ ಒಬ್ಬ ಪಕ್ಷದ ಪರವಾಗಿ ನಡೆದುಕೊಳ್ಳುತ್ತಿದ್ದಾರೆ.
ಗುರುಗಳಾದವರು ಸಮಾಜದ ಹಿತವನ್ನ ಕಾಯಬೇಕು.
ಅದನ್ನು ಬಿಟ್ಟು ಒಬ್ಬ ವ್ಯಕ್ತಿಯ ಪರವಾಗಿ ಈರೀತಿ ನಡೆದುಕೊಳ್ಳುತ್ತಿರುವುದು ಸಮಾಜ ಸಹಿಸುವುದಿಲ್ಲ.
ವೈಯಕ್ತಿಕವಾಗಿ ಸಮಾಜದ, ಟ್ರಸ್ಟ್ ನ ಹಿರಿಯರ ಬಗ್ಗೆ ಮಾತನಾಡಿಸುವುದು ಸರಿಯಲ್ಲ.ನಾಯಿ,ನರಿ, ಹಂದಿಗಳಿಂದ ಮಾತನಾಡಿಸುವುದಲ್ಲ.
ಯಾವುದೋ ನಾಯಿ, ನರಿಗಳಿಂದ ಹೇಳಿಕೆ ಕೊಡಿಸುವ ಸ್ವಾಮೀಜಿಗಳ ನಡೆ ಸಮಾಜಕ್ಕೆ ವ್ಯತಿರಿಕ್ತವಾದುದು.
ಸ್ವಾಮೀಜಿಗಳು ತಮ್ಮ ನಡೆಯನ್ನ ಬದಲಾಯಿಸಿಕೊಳ್ಳಬೇಕು.
ತಮ್ಮನಡೆ ಬದಲಾಯಿಸುವ ಕೊಳ್ಳದಿದ್ದಲ್ಲಿ ಸಮಾಜದ ಹಿರಿಯರಿಂದ ಸ್ಪಷ್ಟ ನಿರ್ಣಯ ತೆಗೆದುಕೊಳ್ಳಲಾಗುವುದು
ಒಂದು ವಾರಗಳ ಕಾಲ ಸ್ವಾಮೀಜಿಗಳಿಗೆ ಗಡುವು ನೀಡಲಾಗುವುದು.
ಒಂದು ವಾರದೊಳಗಾಗಿ ತಮ್ಮನಡೆ ಸರಿಪಡಿಸಿಕೊಳ್ಳದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ.
2 ಡಿ 2 ಸಿ ವಿಚಾರದಲ್ಲಿ ಬಹುದೊಡ್ಡ ಡೀಲ್ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೂಡ ಸಮಾಜದ ಹಿರಿಯರ ಸಮ್ಮುಖದಲ್ಲಿ ಗಂಭೀರ ಚರ್ಚೆ ಮಾಡಲಾಗುವುದು.
ಸ್ವಾಮೀಜಿಗಳು ಮಾಡಿಕೊಂಡಂತಹ ಡೀಲ್ , ವೈಯಕ್ತಿಕ ಆಸ್ತಿ ವಿಚಾರವಾಗಿ ಟ್ರಸ್ಟ್ ನಿಂದ ಸೂಕ್ತ ಕ್ರಮಕೈಗೊಳ್ಳಲಾಗುವುದು.
ಈ ವಿಚಾರವಾಗಿ ಸಮಾಜದ ಎಲ್ಲ ಹಿರಿಯರ, ಮುಖಂಡರ ಸಮ್ಮುಖದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ.
ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕ ವಿಜಯಾನಂದ ಕಾಶಪ್ಪನವರ್.