ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಐದು ವರ್ಷದ ಕಂದಮ್ಮನನ್ನು ಕಿಡ್ನ್ಯಾಪ್ ಮಾಡಿ ಕೊಲೆಗೈದ ಆರೋಪಿಯ ಮೇಲೆ ಪೋಲೀಸರು ಪೈರಿಂಗ್ ಮಾಡಿದ್ದು ಹುಬ್ಬಳ್ಳಿ ಪೋಲೀಸರ ಗುಂಡು ಆರೋಪಿಯ ಎದೆ ಸೀಳಿದೆ.
ಇಡೀ ರಾಜ್ಯದ ಜನತೆ ಇಂದು ಮದ್ಯಾಹ್ನದಿಂದಲೇ ಕಂದಮ್ಮನ ಕೊಲೆ ಸುದ್ದಿ ಕೇಳಿ ಆರೋಪಿಯನ್ನು ಎನಕೌಂಟರ್ ಮಾಡಬೇಕು ಎಂಬ ಕೂಗು,ಆಕ್ರೋಶ ವ್ಯಕ್ತವಾಗಿತ್ತು.ಜನರ ಭಾವನೆಗೆ ಸ್ಪಂದಿಸಿದ ಹುಬ್ಬಳ್ಳಿ ಪೋಲೀಸರು ಆರೋಪಿಯ ಎದೆಗೆ ಗುಂಡು ಹೊಡೆದಿದ್ದಾರೆ.
ಹುಬ್ಬಳ್ಳಿ ಪೋಲೀಸರ ಕಾರ್ಯಕ್ಕೆ ಇಡೀ ರಾಜ್ಯವೇ ಶ್ಲಾಘಿಸುವಂತೆ ಮಾಡಿದೆ.ಎನಕೌಂಟರ್ ಸುದ್ದಿಯನ್ನು ಕೇಳಿದ ಜನತೆ ಹುಬ್ಬಳ್ಳಿ ಪೋಲೀಸರಿಗೆ ವ್ಹಾರೆವ್ಹಾ ಎಂದಿದ್ದಾರೆ.