ಹುಬ್ಬಳ್ಳಿ:- ಪೈಶಾಚಿಕ ಕೃತ್ಯ ಎಸಗಿದ ಹಂತಕನ ಎನ್‌ಕೌಂಟರ್ ಪ್ರಕರಣ…ಕೊಲೆಘಾತುಕನ ಕತೆ ಮುಗಿಸಿದ ಲೆಡಿ ಪಿಎಸ್‌ಐ ಯಾರು…..?
2018 ಬ್ಯಾಚ್‌ನ ಪಿಎಸ್‌ಐ ಅನ್ನಪೂರ್ಣ ಆರ್.ಮುಕ್ಕಣ್ಣವರ.ಇವರು
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗುಜನಟ್ಟಿ ಗ್ರಾಮದವಳು.
ರೈತಾಪಿ ಕುಟುಂಬದಲ್ಲಿ ಹುಟ್ಟಿದ ಅನ್ನಪೂರ್ಣ ಎಂಎಸ್ಸಿ ಪದವೀಧರೆ.ಬಾಲ್ಯದಲ್ಲಿಯೇ ತಂದೆಯನ್ನ ಕಳೆದುಕೊಂಡು ತಾಯಿ ನೆರಳಲ್ಲಿ ಬೆಳೆದು ಪಿಎಸ್‌ಐ ಆದ ಅನ್ನಪೂರ್ಣ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದ್ರೆ,ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಪದವಿಯನ್ನ ಮುಡಿಗೇರಿಸಿಕೊಂಡು ಬಂಗಾರದ ಪದಕ ಪಡೆದವಳು ಅನ್ನಪೂರ್ಣ.
ಎಂಎಸ್ಸಿ ಪದವೀಧರೆ ಅನ್ನಪೂರ್ಣ ಅನ್ಯ ನೌಕರಿಗಳ ಬಗ್ಗೆ ತಲೆ ಕೆಡಿಸಕೊಳ್ಳದೆ ದುಷ್ಟ ಶಕ್ತಿಗಳನ್ನ ಸಂಹಾರ ಮಾಡಲು ಪೊಲೀಸ್ ಇಲಾಖೆ ಆಯ್ಕೆಮಾಡಿಕೊಂಡು ಐದು ವರ್ಷದ ಬಾಲಕಿಯನ್ನ ಕೊಂದ ಹಂತಕನ ಎನ್‌ಕೌಂಟರ್ ಮಾಡಿ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೆ ದೇಶದ ಜನರ ಮನ ಗೆದ್ದ ಪಿಎಸ್ಐ ಅನ್ನಪೂರ್ಣ.
ಈ ದಿಟ್ಟಗತ್ತಿ ಪಿಎಸ್‌ಐ ಅನ್ನಪೂರ್ಣ ಮಾಡಿದ ಸಾಹಸಕ್ಕೆ ಪ್ರತಿಯೊಬ್ಬರಿಂದಲೂ ಅಭಿನಂದನೆಗಳ ಸುರಿಮಳೆ ಆಗಿದೆ..