ಧಾರವಾಡ ಜಿಲ್ಲೆಯಲ್ಲಿನ ಜೂಜಾಟ ಪ್ರಕರಣ 27 ಪ್ರಕರಣ ದಾಖಲು..

Share to all

ಧಾರವಾಡ ಜಿಲ್ಲೆಯಲ್ಲಿನ ಜೂಜಾಟ ಪ್ರಕರಣ 27 ಪ್ರಕರಣ ದಾಖಲು..

ಧಾರವಾಡ

ನಿನ್ನೆ ತಡ ರಾತ್ರಿಜೂಜಾಟದ ದಾಳಿ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣ
ಧಾರವಾಡ ಎಸ್ಪಿ ಗೋಪಾಲ‌ ಬ್ಯಾಕೋಡ ಪ್ರತಿಕ್ರಿಯೆ.
ನಿನ್ನೆ ತಡರಾತ್ರಿ 1 ಗಂಟೆಗೆ ಅಧಿಕಾರಿಗಳು ಗಸ್ತಿನಲ್ಲಿದ್ದರು.
ಆ ವೇಳೆ ನರೇಂದ್ರ ಶಾಲೆ ಬಳಿಯಲ್ಲಿ ಜೂಜಾಟ ನಡೆದ ಮಾಹಿತಿ ಬಂದಿತ್ತು.
ಆಗ ನಮ್ಮ ಸಿಬ್ಬಂದಿ ದಾಳಿ ಮಾಡಿದ್ದರು.ಆಗ ಸಿಬ್ಬಂದಿ ಮೇಲೆ ಕೆಲವರು ದಾಳಿ ಮಾಡಿದ್ದಾರೆ.

ಸದ್ಯ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದಲ್ಲಿ 8 ಜನರ ಬಂಧನ ಆಗಿದೆ.
ಉಳಿದವರ ಪತ್ತೆ ಕಾರ್ಯ ನಡೆದಿದೆ.ಇನ್ನೂ ಹತ್ತು ಜನ ಶಂಕಿತರಿದ್ದಾರೆ.

ರೇಡ್ ವೇಳೆ ಕಾನ್ಸಟೆಬಲ್ ನಾಗರಾಜ್ ಎಂಬುವವರ ತಲೆಗೆ ಪೆಟ್ಟಾಗಿದೆ.ಪಿಎಸ್‌ಐ ಬಸನಗೌಡರಿಗೆ ಕೈ ಮತ್ತು ಕುತ್ತಿಗೆಗೆ ಗಾಯವಾಗಿದೆ.
ಇಬ್ಬರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಒಟ್ಟಾರೆ 3-4 ದಿನದಲ್ಲಿ 27 ಜೂಜಾಟದ ಪ್ರಕರಣ ದಾಖಲಾಗಿವೆ.236 ಜನರಿಗೆ ಬಂಧಿಸಲಾಗಿದೆ.3.38 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ.

ಉದಯ ವಾರ್ತೆ ಧಾರವಾಡ


Share to all

You May Also Like

More From Author