ಐದು ಕದ್ದ..ಇನ್ನೊಂದು ಕದಿಲಿಕ್ಕೆ ಹೋದ..ಪೋಲೀಸರ ಕೈಗೆ ಸಿಕ್ಕ..ಕಳ್ಳನ ಅತಿ ಆಸೆ..ಜೈಲು ಪಾಲಾದ.
ಕಲಘಟಗಿ:- ಅವನಿಗೆ ಇನ್ನೂ ಮೀಸೆ ಈಗ ಚಿಗುರು ಒಡಿತಾ ಇದೆ..ಅವನ ಆಸೆ ಮಾತ್ರ ಆದಷ್ಟು ಬೇಗ ಶ್ರೀಮಂತನಾಗಬೇಕೆಂಬ ಕನಸು.ಅದಕ್ಕಾಗಿ ಅವನು ಇಳಿದಿದ್ದು ಬೈಕ್ ಕಳ್ಳತನಕ್ಕೆ ಐದು ಕದ್ದ..ಇನ್ನೊಂದಕ್ಕೆ ಸ್ಕೆಚ್ ಹಾಕಿದ್ದಾಗಲೇ ಕಲಘಟಗಿ ಪೋಲೀಸರ ಕೈಗೆ ಸಿಕ್ಕು ಜೈಲು ಪಾಲಾಗಿದ್ದಾನೆ.
ಅವನ ಹೆಸರು ಕಲ್ಮೇಶ ಧಾರವಾಡ ಅಂತಾ ವಯಸ್ಸು 23 ಕಲಘಟಗಿ ತಾಲೂಕಿನ ಕಣವಿ ಹೊನ್ನಾಪುರ ಗ್ರಾಮದವನು.ಅವನ ಪಾಲಿಗೆ ಅವನು ಗೌಂಡಿ ಕೆಲಸ ಮಾಡಿಕೊಂಡಿದ್ದ.ಆದರೆ ಈ ಬೈಕ್ ಕಳ್ಳತನದ ಆಸೆ ಇವತ್ತು ಜೈಲು ಪಾಲಾಗುವಂತೆ ಮಾಡಿದೆ.
ಹೇಳಿ..ಕೇಳಿ ಕಲಘಟಗಿ ಇನಸ್ಪೆಕ್ಟರ್ ಶ್ರೀಶೈಲ್ ಕೌಜಲಗಿ ಅಂದರೆ ಸುಮ್ಮನೇನಾ ಕಣ್ಮುಂದೆ ಯಾರೇ ಕಂಡರೂ ಏನಪ್ಪ ನಿಂದು ಅಂತಾ ಹಿಂದೆ ಮುಂದೆ ವಿಚಾರಣೆ ಮಾಡುವವನ ಕೈಗೆ ಸಿಕ್ಕ ಕಲ್ಮೇಶಪ್ಪ ಜೈಲಿಗೆ ಹೋಗಿಯೇ ಬಿಟ್ಟ..ಕಲ್ಮೇಶನಿಂದ 2.93 ಲಕ್ಷ ಕಿಮ್ಮತ್ತಿನ 5 ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಒಂದು ಟೀಮಿನಲ್ಲಿ ಪಿಎಸ್ಆಯ್ ಕರವೀರಪ್ಪನವರ.ಸಿಬ್ಬಂದಿಗಳಾದ ಮಹಾಂತೇಶ ನಾನಾಗೌಡ್ರ..ಗೋಪಾಲ ಫಿರಗಿ.ಎಂ.ಎಸ್.ಎಲಿಗಾರ..ಮಲ್ಲಿಕಾರ್ಜುನ.ಹಂಚಿನಮನಿ..ಕುಮಾರ ಮಾನೋಜ..ಇತರರು ಭಾಗಿಯಾಗಿದ್ದರು.