ಬಾಲಕಿ ಮರ್ಡರ್ ಪ್ರಕರಣ ಸಿಐಡಿಗೆ..ಹುಬ್ಬಳ್ಳಿಗೆ ಆಗಮಿಸಿದ ಅಧಿಕಾರಿಗಳ ತಂಡ..
ಹುಬ್ಬಳ್ಳಿ: ಐದು ವರ್ಷದ ಬಾಲಕಿ ಮರ್ಡರ್ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆ ಗೊಂಡಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಗೆ ಸಿಐಡಿ ಅಧಿಕಾರಿಗಳು ಆಗಮಿಸಿದ್ದಾರೆ.
ಆರೋಪಿ ಪೈರಿಂಗ್ ನಲ್ಲಿ ಸಾವು ಹಿನ್ನೆಲೆಯಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದ್ದು, ಆರೋಪಿ ಸಾವು ಪ್ರಕರಣದಲ್ಲಿ ನಾಳೆ ಅಥವಾ ನಾಡಿದ್ದನಿಂದ ಸಿಐಡಿ ತನಿಖೆ ಆರಂಭವಾಗೋ ಸಾಧ್ಯತೆಯಿದೆ.
ಎಸ್.ಪಿ ವೆಂಕಟೇಶ್,ಡಿವೈಎಸ್‌ಪಿ ಪುನೀತ್‌ಕುಮಾರ, ಇನ್ಸ್ಪೆಕ್ಟರ್ ಮಂಜುನಾಥ ಅಧಿಕಾರಿಗಳನ್ನ ಒಳಗೊಂಡ ಸಿಐಡಿ ತಂಡ ಹುಬ್ಬಳ್ಳಿಗೆ ಆಗಮಿಸಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.