ಹೊರ ರಾಜ್ಯದವರಿಂದ ಅಪರಾಧ ಕೃತ್ಯ.. ಜಿಲ್ಲಾವಾರು ಮಾಹಿತಿ ಸಂಗ್ರಹಿಸಲು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡುವಂತೆ ಗೃಹ ಸಚಿವರಲ್ಲಿ ಮನವಿ.
ಹುಬ್ಬಳ್ಳಿ :ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಹು ಅಂತಸ್ತಿನ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದು, ಸ್ಥಳೀಯ ಕಾರ್ಮಿಕರಿಗಿಂತ ಹೊರ ರಾಜ್ಯಗಳಾದ ಬಿಹಾರ್ , ಪಶ್ಚಿಮ ಬಂಗಾಳ, ಆಂದ್ರಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಇನ್ನುಳಿದ ರಾಜ್ಯಗಳಿಂದ ಆಗಮಿಸುವ ಕಾರ್ಮಿಕರು ಅತಿ ಕಷ್ಟಕರವಾದ ಕೆಲಸಗಳನ್ನು ಮಾಡುತ್ತಾರೆ ಸರಿ, ಆದರೆ ಡ್ರಗ್ಸ್, ಗಾಂಜಾ ಸೇವನೆ ಮಾಡುವುದುಕಂಡು ಬರುತ್ತಿದೆ. ಇದರಿಂದ ನಗರಗಳಲ್ಲಿ ಅಪರಾಧ ಚಟುವಟಿಕೆ ಹೆಚ್ಚಾಗುತ್ತಿವೆ.
ಹೊರ ರಾಜ್ಯದ ಕಾರ್ಮಿಕರು ಡ್ರಗ್ಸ್ ಮತ್ತು ಗಾಂಜಾ ಸೇವನೆ ಮಾಡುವುದನ್ನು ಕಂಡು ಬರುತ್ತಿದೆ, ಆದರೆ ಕಟ್ಟಡದ ಮಾಲೀಕರಾಗಲಿ, ಇಂಜಿನಿಯರ್ಸ್ ಗಳಾಗಲಿ ಅಥವಾ ಮೇಸ್ತ್ರಿಗಳಾಗಲಿ ಈ ಕುರಿತು ಗಮನ ಹರಿಸುವುದಿಲ್ಲ. ಅಲ್ಲದೇ ಹೊರ ರಾಜ್ಯದ ಕಾರ್ಮಿಕರ ಬಗ್ಗೆ ಯಾವುದೇ ಮಾಹಿತಿ ಕೂಡ ಇವರ ಹತ್ತಿರ ಇರುವುದಿಲ್ಲ. ಕುಡಿದು ಅಥವಾ ನಶೆಯಲ್ಲಿ ಹೇಯ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯ ಲ್ಲಿ ನಡೆದ ಘಟನೆ ಕಣ್ಣ ಮುಂದಿದೆ.
ಆದಕಾರಣ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿರುವ ಹೊರ ರಾಜ್ಯದ ಕಾರ್ಮಿಕರ ಮಾಹಿತಿಯನ್ನು ಸಂಬಂಧಿಸಿದ ಸ್ಥಳೀಯ ಕಟ್ಟಡ ಕಾರ್ಮಿಕರು, ಇಂಜಿನಿಯರ್ಸ್ ಹಾಗೂ ಮೇಸ್ತ್ರಿಗಳಿಂದ ಅವರುಗಳ ಆಧಾರ ಕಾರ್ಡ್ ಜೊತೆಗೆ ದೂರವಾಣಿ ಸಂಖ್ಯೆಯೊಂದಿಗೆ ಎಲ್ಲ ಮಾಹಿತಿಗಳನ್ನು ಒಳಗೊಂಡ ಸಮಗ್ರವಾದ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಸಂಗ್ರಹಿಸುವಂತೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮಾನ್ಯ ಗೃಹ ಸಚಿವರಾದ ಶ್ರೀ ಡಾ. ಜಿ. ಪರಮೇಶ್ವರ್ ರವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಕಟ್ಟಡ ನಿರ್ಮಾಣ ಪ್ರಾರಂಭದಿಂದ ಮುಕ್ತಾಯದ ನಂತರ ಅವರುಗಳ ಸಹಿ ಪಡೆಯಬೇಕು ಮತ್ತು ತದ ನಂತರ ಹೊರ ರಾಜ್ಯದ ಆಯಾ ಕಾರ್ಮಿಕರು ಸ್ಥಳೀಯದಲ್ಲೇ ಉಳಿಯುತ್ತಾರೋ ಅಥವಾ ಬೇರೆ ಕಡೆ ಹೋಗುತ್ತಾರೋ ಹೋಗೋ ಸಂದರ್ಭದಲ್ಲಿ ಮಾಹಿತಿಯನ್ನು ಒದಗಿಸಬೇಕು ಮತ್ತು ಬೇರೆ ಕಡೆ ಹೋದಲ್ಲಿ ಅಲ್ಲಿಯ ಠಾಣೆಗಳಿಗೆ ಮಾಹಿತಿಯನ್ನು ನೀಡಬೇಕು, ಅಂದಾಗ ಮಾತ್ರ ಅಪರಾಧ ಚಟುವಟಿಕೆ ತಡೆಗಟ್ಟಬಹುದೆಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮೆಣಸಿನಕಾಯಿ ತಿಳಿಸಿದ್ದಾರೆ…