ಕಳ್ಳತನಕ್ಕೆ ಯತ್ನಿಸಿದ ದಂಡುಪಾಳ್ಯ ಮಾದರಿ ಗ್ಯಾಂಗ್.ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು.
ಹುಬ್ಬಳ್ಳಿ:- ಕಳ್ಳತನಕ್ಕೆ ಯತ್ನಿಸಿದ ದಂಡುಪಾಳ್ಯಾ ಮಾದರಿಯ ಗ್ಯಾಂಗ್ ಒಂದನ್ನು ಹುಬ್ಬಳ್ಳಿ ಹೊರವಲಯದಲ್ಲಿ ಸಾರ್ವಜನಿಕರೇ ಹಿಡಿದು ಬೆತ್ತಲೆ ಮಾಡಿ ಪೋಲೀಸರಿಗೆ ಹಿಡಿದು ಕೊಟ್ಟಿದ್ದಾರೆ..
ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ಹೊರವಲಯದ ಗ್ಯಾರೇಜ್ ಕಳ್ಳತನಕ್ಕೆ ಯತ್ನಿಸಿದ ಗ್ಯಾಂಗ್ ಒಂದನ್ನು ಹಿಡಿದ ಸಾರ್ವಜನಿಕರು ಬೆತ್ತಲೆ ಮಾಡಿ,ಕಟ್ಟಿಹಾಕಿ ಪೋಲೀಸರಿಗೆ ಹಿಡಿದು ಕೊಟ್ಟ ಘಟನೆ ಜರುಗಿದೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಗ್ಯಾಂಗ್ ಬಗ್ಗೆ ಪೋಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.