ಶಕ್ತಿ ಯೋಜನೆ ಎಪೆಕ್ಟ್ ಬಸ್ಸನಲ್ಲಿ ಜಡೆ ಜಗಳ.ಚಪ್ಪಲಿಯಿಂದ ಬಡಿದಾಡಿಕೊಂಡ ಮಹಿಳೆಯರು.
ಬೆಳಗಾವಿ:-ರಾಜ್ಯ ಸರಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆ ಎಪೆಕ್ಟ ನಿಂದ ಬಸ್ಸನಲ್ಲಿ ಮಹಿಳೆಯರ ಪ್ರಯಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬಸ್ಸಿನಲ್ಲಿ ಮಹಿಳೆಯರ ಪ್ರಯಾಣ ಪ್ರೀ ಆದ ಹಿನ್ನೆಲೆಯಲ್ಲಿ ಬಸ್ಸಿನಲ್ಲಿ ಮಹಿಳೆಯರ ದರ್ಭಾರ ಹೆಚ್ಚಾಗಿದೆ.ಮಹಿಳೆಯರ ಪ್ರಯಾಣ ಹೆಚ್ಚಾದಂತೆ ಬಸ್ಸಿನಲ್ಲಿ ಸೀಟಿನ ಕೊರತೆಯಾಗುತ್ತಿದೆ.ಆದ್ದರಿಂದ ಅಲ್ಲಲ್ಲಿ ಸೀಟಿಗಾಗಿ ಮಹಿಳೆಯರು ಬಡಿದಾಡಿಕೊಂಡ ಉದಾಹರಣೆಗಳು ಕೇಳಿ ಬರುತ್ತಿವೆ.
ಅದಕ್ಕೊಂದು ತಾಜಾ ಉದಾಹರಣೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ನಿಂದ ಹೊರಟ ಬಸ್ಸಿನಲ್ಲಿ ಮಹಿಳೆಯರು ಚಪ್ಪಲಿಯಿಂದ ಬಡಿದಾಡಿಕೊಂಡ ಘಟನೆ ಜರುಗಿದೆ.
ಮಹಿಳೆಯರಿಬ್ಬರ ಜಡೆ ಜಗಳ ಆರಂಭವಾಗುತ್ತಿದ್ದಂತೆ ಕಂಡಕ್ಟರ ಬಸ್ಸ ನಿಲ್ಲಿಸಿ ಜಗಳ ಬಗೆಹರಿಸಿದರು.
ಒಟ್ಟಿನಲ್ಲಿ ಸರಕಾರ ಜಾರಿ ಮಾಡಿರುವ ಶಕ್ತಿಯೋಜನೆ ಜೊತೆಗೆ ಬಸ್ಸುಗಳ ಸಂಖ್ಯೆ ಹೆಚ್ಚಿಗೆ ಮಾಡಿದರೆ ಅನುಕೂಲವಾಗುತ್ತೆ ಅಂತಾ ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಉದಯ ವಾರ್ತೆ ಬೆಳಗಾವಿ