ನಿವೃತ್ತ IPS ಕೊಲೆಗೆ ಆ ಯುವತಿಯ ನಂಟೇ ಕಾರಣವಾಯಿತಾ..ದೈತ್ಯನನ್ನು ಮುಗಿಸಿದ್ದೇನೆಂದ ಪತ್ನಿ ಪಲ್ಲವಿ ವಿಡಿಯೋ ಕಾಲ್….

Share to all

ನಿವೃತ್ತ IPS ಕೊಲೆಗೆ ಆ ಯುವತಿಯ ನಂಟೇ ಕಾರಣವಾಯಿತಾ..ದೈತ್ಯನನ್ನು ಮುಗಿಸಿದ್ದೇನೆಂದ ಪತ್ನಿ ಪಲ್ಲವಿ ವಿಡಿಯೋ ಕಾಲ್….

ಬೆಂಗಳೂರು: ಬೆಂಗಳೂರಿನಲ್ಲಿ ಹಿರಿಯ ಐಪಿಎಸ್‌ ಹಾಗೂ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌ ಕೊಲೆಯ ಹಿಂದೆ ಆ ಮಗಳೂರು ಮೂಲದ ಯುವತಿಯ ನಂಟೇ ಕಾರಣವಾಯಿತಾ..ಅಥವಾ ಆಸ್ತಿ ವಿಚಾರವಾ ಅನ್ನೋದು ಈಗ ಚರ್ಚೆಯ ವಿಷಯವಾಗಿದೆ..

ಎಚ್‌ ಎಸ್‌ ಆರ್‌ ಲೇ ಔಟ್‌ ನ ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಕೊಲೆಯಾಗಿರುವ ಓಂಪ್ರಕಾಶ್‌ ಅವರನ್ನು ಪತ್ನಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಈ ಹಿನ್ನಲೆಯಲ್ಲಿ ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆಯಾಗಿದೆ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ದೃಢಪಟ್ಟಿದೆ.ತನ್ನ ತಂಗಿ ಹೆಸರಿಗೆ ದಾಂಡೇಲಿಯಲ್ಲಿ ಓಂಪ್ರಕಾಶ್‌ ಆಸ್ತಿ ಮಾಡಿದ್ದರು.ಇದೇ ವಿಚಾರದಲ್ಲಿ ದಂಪತಿ ನಡುವೆ ವಾಗ್ವಾದ ನಡೆಯುತ್ತಿತ್ತು.ಅದು ವಿಪರೀತಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆ ಮಾಡಿದ ಮೇಲೆ ಪತ್ನಿ ಪಲ್ಲವಿ ಅವರು, ಮತ್ತೋರ್ವ ಐಪಿಎಸ್‌ ಅಧಿಕಾರಿಗೆ ಕೊನೆಗೂ, ರಾಕ್ಷಸನ ಸಂಹಾರವಾಗಿದೆ ಎನ್ನುವ ಲಹರಿಯಲ್ಲಿ ಮೆಸೇಜ್‌ ರವಾನಿಸಿದ್ದರಂತೆ.ಇದನ್ನು ಪೊಲೀಸರ ಗಮನಕ್ಕೆ ಆ ಐಪಿಎಸ್‌ ತಂದಿದ್ದರು ಎನ್ನಲಾಗಿದೆ. ಪತ್ನಿ ಪಲ್ಲವಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.

ಅಂದ್ಹಾಗೆ 68 ವರ್ಷ ವಯಸ್ಸಿದ ಓಂ‌ ಪ್ರಕಾಶ್,1981 ಬ್ಯಾಚ್ ನ ಐಪಿಎಸ್ ಅಧಿಕಾರಿ .2015 ರಲ್ಲಿ ರಾಜ್ಯದ ಡಿಜಿಐಜಿಪಿಯಾಗಿದ್ದ ಓಂ ಪ್ರಕಾಶ್. ರಾಜ್ಯದ 38 ನೇ ಡಿಜಿಐಜಿಪಿ ಕೂಡ. 2017 ರಲ್ಲಿ ನಿವೃತ್ತ ರಾಗಿದ್ದರು. ಅಂದ್ಹಾಗೆ ಓಂ ಪ್ರಕಾಶ್ ಮೂಲತಃ ಬಿಹಾರ ರಾಜ್ಯದ ಚಾರಹೆಸರುವಾಸಿಯಾಗಿದ್ದರು.

ಎಮ್ ಎಸ್ ಸಿ ಜಿಯೋಲಾಜಿಯಲ್ಲಿ ಪದವಿ ಪಡೆದಿದ್ದರು. ಡಿಜಿಐಜಿಪಿ ಯಾಗಿದ್ದ ವೇಳೆ ಮಹಿಳಾ ಭದ್ರತೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಕೌಂಟರ್ ಟೆರರಿಸಂ, ಮೂಲತ ಯೋಜನೆಗಳನ್ನ ರಾಜ್ಯದಲ್ಲಿ ಜಾರಿಮಾಡಿ ಹೆಸರುವಾಸಿಯಾಗಿದ್ದರು.

ಪತ್ನಿಯಿಂದಲೇ ಆಸ್ತಿ ವಿಚಾರವಾಗಿ ಕೊಲೆ ಆಗಿರುವ ಓಂಪ್ರಕಾಶ್‌ ಅವರ ದುರ್ಮರಣದ ಸಮಗ್ರ ತನಿಖೆಗೆ ಆದೇಶಿಸಲಾಗಿದೆ.ಕೊಲೆಯಲ್ಲಿ ಪತ್ನಿ ಜತೆಗೆ ಬೇರೆ ಯಾರಾದರೂ ಶಾಮೀಲಾಗಿದ್ದರಾ ಎನ್ನುವುದರ ತನಿಖೆ ನಡೆಯುತ್ತಿದ್ದು ಸ್ಪೋಟಕ ಮಾಹಿತಿ ದೊರೆತಿದೆ ಎನ್ನಲಾಗಿದೆ.

ಉದಯ ವಾರ್ತೆ
ಬೆಂಗಳೂರು.


Share to all

You May Also Like

More From Author