ಎಂಜನೀಯರ್ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಗರಂ.ಸಸ್ಪೆಂಡ್ ಮಾಡಸ್ತೇನಿ ಅಂತಾ ಎಚ್ಚರಿಕೆ.
ಕೊಪ್ಪಳ:-ಏನ್ರೀ ನಿಮಗ ಮೀಟಿಂಗ್ ಇದ್ದಾಗ ಬಿಪಿ ಶುಗರ್ ಬರತ್ತಾ.ಸರಕಾರಿ ಕೆಲಸ ಮಾಡಲು ಬಂದಿದ್ದೀರಾ ಇಲ್ಲಾ ಬೇರೆ ಕೆಲಸ ಮಾಡಲು ಬಂದಿದ್ದೀರಾ.ನೀವ್ ಹಿಂಗ ಮಾಡಿದರ ಸಸ್ಪೆಂಡ್ ಮಾಡಸ್ತೇನಿ ಅಂತಾ ಅಧಿಕಾರಿಯೊಬ್ಬರ ಚಳಿ ಬಿಡಿಸಿದ ಸಚಿವ ಶಿವರಾಜ್ ತಂಗಡಗಿ.
ಇಂದು ಕೊಪ್ಪಳದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕರೆಯಲಾಗಿದ್ದ ಬರ ಪರಿಹಾರ ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಇಇ ಗೈರಾದ ಹಿನ್ನೆಲೆಯಲ್ಲಿ ಪೋನ್ ಮಾಡಿ ಅಧಿಕಾರಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ನಗರಾಭಿವೃದ್ಧಿ ಇಲಾಖೆಯ ಇಇ ತ್ಯಾಗರಾಜ್ ಇವತ್ತಿನ ಬರ ಮೀಟಿಂಗ್ ಗೆ ಹಾಜರಾಗಬೇಕಿತ್ತು.ಹಾಜರಾಗಿರಲಿಲ್ಲಾ.ಸಚಿವರೇ ಪೋನ್ ಮಾಡಿ ಯಾಕ್ರೀ ನಿಮಗ ಮೀಟಿಂಗ್ ಇದ್ದಾಗ ಬಿಪಿ,ಶುಗರ್ ಬರತೈತಿ.ನೀವ ಇದೇ ರೀತಿ ಮಾಡಿದರೆ ಸಸ್ಪೆಂಡ್ ಮಾಡಿ ಕಳಿಸ್ತೀನಿ ಅವಾಗ ಗೊತ್ತಾಗುತ್ತೇ ನಿನಗೊಬ್ಬನಿಗೆ ಬಿಪಿ, ಶುಗರ್ ಬರತೈತಿ ಎಂದು ಸಚಿವ ಶಿವರಾಜ್ ತಂಗಡಗಿ ಅಧಿಕಾರಿ ವಿರುದ್ಧ ಹರಿಹಾಯ್ದರು.
ಉದಯ ವಾರ್ತೆ ಕೊಪ್ಪಳ.