ರಜತ್ ಉಳ್ಳಾಗಡ್ಡಿಮಠಗೆ ಟಿಕೆಟ್ ನೀಡವಂತೆ ಹೆಚ್ಚಾದ ಒತ್ತಡ.ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಮನವಿ.
ಧಾರವಾಡ:-ಕಾಂಗ್ರೆಸ್ ಯುವ ನಾಯಕ ರಜತ್.ಉಳ್ಳಾಗಡ್ಡಿಮಠ ಅವರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂದು NSUI ಘಟಕದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಮನವಿ ಸಲ್ಲಿಸಲಾಯಿತು.
ಇಂದು ಧಾರವಾಡದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಭೇಟಿ ಮಾಡಿದ NSUI ಘಟಕ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸಾಕಷ್ಟು ಸಂಘಟನೆ ಮಾಡಿ ಟಿಕೆಟ್ ನ್ನು ಮಾಜಿ ಸಿಎಂ ಜಗದೀಶ ಶೆಟ್ಟರಗೆ ಬಿಟ್ಟು ಕೊಟ್ಟು ತ್ಯಾಗಮಯಿ ಎನಿಸಿಕೊಂಡಿದ್ದಾರೆ.
ವಿದ್ಯಾರ್ಥಿ ದಿಸೆಯಿಂದಲೂ ಕಾಂಗ್ರಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ನೀಡಿದ ಎಲ್ಲಾ ಜಾವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.ಅಲ್ಲದೇ ಲಿಂಗಾಯತ ಮತ ಸೆಳೆಯಬಲ್ಲ ಯುವ ಸಂಘಟಕ ಆಗಿರುವುದರಿಂದ ಅವರಿಗೆ ಕಾಂಗ್ರಸ್ ಟಿಕೆಟ್ ನೀಡ ಬೇಕೆಂದು ಮನವಿ ಸಲ್ಲಿಸಿದರು.
ಉದಯ ವಾರ್ತೆ ಧಾರವಾಡ