ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ. ಪ್ಲ್ಯಾನ್ ಮಾಡಿ ಮನೆಗೆ ನುಗ್ಗಿದ್ದ ಹಂತಕ.ಕೊಲೆಗೆ ಕಾರಣ ಬಿಚ್ಚಿಟ್ಟ ಎಸ್ ಪಿ.
ಉಡುಪಿ:-ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಪೋಲೀಸರು ಹದಿನಾಲ್ಕು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.
ಆತ ಕೊಲೆ ಮಾಡಿರುವ ಬಗ್ಗೆ ನಮಗೆ ಸಾಕ್ಷಿಗಳು ಲಬ್ಯವಾಗಿವೆ.ಆತ ಕೊಲೆ ಮಾಡಿರುವುದು ನಮಗೆ ಖಚಿತವಾಗಿದೆ.ಅಲ್ಲದೇ ಕೊಲೆಗೆ ಕಾರಣ ಏನು ಅಂತಾ ಹೇಳಿದ್ದಾನೆ.ಎಂದು ಉಡುಪಿ ಎಸ್ಪಿ ಅರುಣ ಕುಮಾರ ತಿಳಿಸಿದ್ದಾರೆ.
ಆರೊಪಿಯ ಹಿನ್ನೆಲೆಯನ್ನು ಇನ್ನಷ್ಟು ಪರಿಶೀಲಿಸಬೇಕಾಗಿದೆ.ಪ್ರಾಥಮಿಕ ತನಿಖೆಯಲ್ಲಿ ಆತ ಪೋಲೀಸ ಸೇವೆಯಲ್ಲಿದ್ದಾ ಎಂದು ತಿಳಿದು ಬಂದಿದೆ ಎನ್ನಲಾಗಿದೆ.
ಆರೋಪಿ ಪ್ರವೀಣ ಚೌಗಲೇ ಆಯ್ನೇಜಾಳನ್ನು ಕೊಲೆ ಮಾಡಲು ಬಂದಿದ್ದಾ.ಆದರೆ ಅವಳ ಕೊಲೆಯನ್ನು ತಡೆಯಲು ಬಂದಾಗ ಉಳಿದವರನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಕೊಲೆಗೆ ಕಾರಣ ಮಾತ್ರ ಅಂತಹ ದೊಡ್ಡದೇನಿಲ್ಲಾ.ಅಯ್ನಾಝ್ ಳನ್ನು ಕೊಲೆಗಾರ ಅತೀಯಾಗಿ ಹಚ್ಚಿಕೊಂಡಿದ್ದ ಅವಳು ತನ್ನ ಜೊತೆ ಬಿಟ್ಟು ಬೇರೆ ಯಾರ ಜೊತೆನೂ ಮಾತನಾಡಬಾರದು ಅನ್ನೋದು ಅವನ ಆಸೆ.ಅದಕ್ಕೆ ಅವಳು ಬೇರೆಯವರ ಜೊತೆ ಮಾತನಾಡಿದ್ದೇ ಅವನಲ್ಲಿ ಅಸೂಯೆ ಹುಟ್ಟಿ ಕೊಲೆ ಮಾಡಿದ್ದಾನೆ ಎಂದು ಎಸ್.ಪಿ ಡಾ:ಅರುಣ ಕುಮಾರ ತಿಳಿಸಿದ್ದಾರೆ.
ಉದಯ ವಾರ್ತೆ ಉಡುಪಿ