ಬಾಲ ಮಂದಿರದಲ್ಲಿ ಬಾಲಕನ ಮೇಲೆ ವಾರ್ಡ್ ನಿಂದ ಹಿಗ್ಗಾಮುಗ್ಗಾ ಥಳಿತ – ವಾರ್ಡನ್ ಮಂಜುನಾಥ ನಿಂದ ರಾಮಚಂದ್ರನ ಮೇಲೆ ಥಳಿತ ವರದಿ ನೀಡುವಂತೆ DC ಸೂಚನೆ
ಹುಬ್ಬಳ್ಳಿ -ಸರ್ಕಾರಿ ಬಾಲಮಂದಿರ ಒಂದರಲ್ಲಿ ಬಾಲಕನ ಮೇಲೆ ವಾರ್ಡನ್ ರೊಬ್ಬರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಉಣಕಲ್ಲ್ ದಲ್ಲಿರುವ ಬಾಲಕರ ಸರಕಾರಿ ಬಾಲಮಂದಿರದಲ್ಲಿ ಈ ಒಂದು ಘಟನೆ ನಡೆದಿದ್ದು ಬಾಲಕ ರಾಮಚಂದ್ರನ ಮೇಲೆ ವಾರ್ಡನ್ ಮಂಜುನಾಥ ಬಡಿಗೆಯಿಂದ ಹಿಗ್ಗಾಮುಗ್ಗಾ ಥಳಿಸಿ ಗಾಯಗೊಳಿಸಿದ್ದಾರೆ.
ಈ ಒಂದು ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು ಇನ್ನೂ ಘಟನೆ ಕುರಿತಂತೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗೆ ಸೂಚಿಸಿದ್ದಾರೆ.
ಥಳಿತದಿಂದ ಗಾಯಗೊಂಡ ಬಾಲಕ ಕಿಮ್ಸ್‌ನಲ್ಲಿ ವೈದ್ಯಕೀಯ ಕಾನೂನು ಪ್ರಕರಣ(ಎಂಎಲ್‌ಸಿ)ದ ಅಡಿಯಲ್ಲಿ ಚಿಕಿತ್ಸೆ ಪಡೆದು ಸಧ್ಯ ಬಾಲ ಮಂದಿರದಲ್ಲಿದ್ದಾನೆ.ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದ ಬಾಲಕ ತಂದೆಯನ್ನು ಕಳೆದುಕೊಂಡಿದ್ದು ಸರಕಾರಿ ಬಾಲಮಂದಿರದಲ್ಲಿದ್ದಾನೆ.
ಬಾಲಕ ಎರಡನೇ ಪಿಯುಸಿ ಓದುತ್ತಿದ್ದು ದೀಪಾವಳಿ ಅಮಾವಾಸ್ಯೆ ದಿನದಂದು ಬಾಲಮಂದಿರದಲ್ಲಿ ಸಹಪಾಠಿಗಳ ಜೊತೆ ಸಹಜವಾಗಿಯೇ ಕೀಟಲೆ ಮಾಡುತ್ತಿದ್ದಾಗ ಇದನ್ನು ಕಂಡು ವಾರ್ಡ್ ನ ಮಂಜುನಾಥ ಕುಂಬಾರ ಅವರು ಬಂದು ನನ್ನನ್ನೇ ಟಾರ್ಗೇಟ್ ಮಾಡಿ ಬಡಿಗೆಯಿಂದ ಹೊಡೆಯಲು ಶುರು ಮಾಡಿದರು.ಬೇಡ ಸರ್ ಸರಿಯಲ್ಲ ನೋಡಿರಿ ಎಂದು ಹೇಳಿದರೂ ಬಡಿಗೆಯಿಂದ ಮೈಮೇಲೆ ಬಾಸುಂಡೆ ಬರುವಂತೆ ಹಿಗ್ಗಾಮುಗ್ಗಾ ಹೊಡೆದರು ಅಂದು ಇಡೀ ರಾತ್ರಿ ಆ ನೋವಿನಲ್ಲೇ ನರಳಾಡಬೇಕಾಯಿತು.
ಕಿಮ್ಸ್‌ನಲ್ಲಿ ಮರುದಿನ ಚಿಕಿತ್ಸೆ ಪಡೆದಿದ್ದೇನೆ ಎಂದು ಬಾಲಕ ಘಟನೆ ಮಾಹಿತಿಯನ್ನು ಉದಯ ವಾರ್ತೆಗೆ ತಿಳಿಸಿದ್ದಾನೆ.
ಬಾಲಕನ ಮೇಲೆ ಹಲ್ಲೆ ಪ್ರಕರಣವನ್ನು ಇಲಾಖೆ ಅಧಿಕಾರಿಗಳು ಮುಚ್ಚುವ ಯತ್ನ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೋ ಆದರೆ ಎಂಎಲ್‌ಸಿ ಮಾಡಿಸಬೇಡ ನಾವೆಲ್ಲ ಸರಿ ಮಾಡುತ್ತೇವೆ ಎಂದು ಇಲಾಖೆ ಅಧಿಕಾರಿಗಳು ಬಾಲಕನಿಗೆ ಬೆದರಿಕೆ ಹಾಕಿದ್ದರಂತೆ ಎಂಬ ಮಾತುಗಳು ಬಾಲ ಮಂದಿರದಲ್ಲಿ ಕೇಳಿ ಬರುತ್ತಿವೆ.
ಈ ಘಟನೆ ಕುರಿತಂತೆ ಡಿಸಿ ಗುರುದತ್ತ ಹೆಗಡೆ ಅವರ ಗಮನಕ್ಕೆ ಬಂದಿದ್ದು ಅವರು ಎಂಎಲ್‌ಸಿ ಮಾಡಿಸುವಂತೆ ಸೂಚಿಸಿದ ಬಳಿಕವೇ ಬಾಲಕನಿಂದ ಎಂಎಲ್‌ಸಿ ಕೇಸ್ ಮಾಡಿಸಲಾಗಿದೆ.ಪ್ರಕರಣದ ವಿಸ್ತೃತ ವರದಿಯನ್ನು ಕೂಡಾ ನೀಡುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಮಕ್ಕಳ ಅಧಿಕಾರಿಗಳಿಗೆ ತಿಳಿಸಿದ್ದಾರೆ.ಡಿಸಿ ಸೂಚನೆ ನೀಡುತ್ತಿದ್ದಂತೆ.
ಇತ್ತ ಹಾಸ್ಟೆಲ್‌ಗೆ ಆಗಮಿಸಿ ಬಾಲಕನ ಹೇಳಿಕೆಯನ್ನು ಕೂಡಾ ಜಿಲ್ಲಾ ಮಕ್ಕಳ ಅಧಿಕಾರಿಗಳು ಪಡೆದುಕೊಂಡಿದ್ದಾರೆ.ಹಾಸ್ಟೆಲ್‌ನಲ್ಲಿ ವಾರ್ಡನ್ ಕುಂಬಾರ,ಬಾಲಕರು ಹಾಗೂ ಸಿಬ್ಬಂದಿಗೆ ವಿಪರೀತ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರವಾದ ಆರೋಪಗಳು ಕೂಡಾ ಕೇಳಿ ಬಂದಿದ್ದು ಸಿಬ್ಬಂದಿಗೆ ನಾಲ್ಕು ತಿಂಗಳಿಂದ ವೇತನ ಪಾವತಿಗೆ ಅವಕಾಶ ನೀಡುತ್ತಿಲ್ಲವಂತೆ.
ಬಾಲಕರಿಗೆ ಸಾಬೂನು ಹಾಗೂ ಇತರೆ ವಸ್ತುಗಳನ್ನು ಸಕಾಲಕ್ಕೆ ಪೂರೈಸುತ್ತಿಲ್ಲವಂತೆ ಎಂಬ ದೂರುಗಳು ಕೂಡಾ ಬಾಲ ಮಂದಿರದ ಬಾಲಕರಿಂದ ಕೇಳಿ ಬಂದಿದ್ದು ಸಧ್ಯ ಈ ಒಂದು ಘಟನೆ ಕುರಿತಂತೆ ವರದಿಯನ್ನು ನೀಡುತ್ತಿದ್ದು ಇತ್ತ ಡಿಸಿ ಯವರು ಘಟನೆ ಕುರಿತಂತೆ ಏನೇನು ಕ್ರಮವನ್ನು ಕೈಗೊಳ್ಲುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಉದಯ ವಾರ್ತೆ ಹುಬ್ಬಳ್ಳಿ