ಇಂಡಿಯಾ ಮ್ಯಾಚ್ ಇದ್ರೆ ಅವತ್ತು ನಮಗೆ ಸರಕಾರಿ ರಜೆ. ಭಾರತದ ಅಭಿಮಾನದ ಬಗ್ಗೆ ರೈತನೊಬ್ಬನ ವಿಡಿಯೋ ವೈರಲ್..

Share to all

ಇಂಡಿಯಾ ಮ್ಯಾಚ್ ಇದ್ರೆ ಅವತ್ತು ನಮಗೆ ಸರಕಾರಿ ರಜೆ.
ಭಾರತದ ಅಭಿಮಾನದ ಬಗ್ಗೆ ರೈತನೊಬ್ಬನ ವಿಡಿಯೋ ವೈರಲ್..

ಹುಬ್ಬಳ್ಳಿ:- ರವಿವಾರ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಪೈನಲ್ ಎಲ್ಲರಿಗೂ ಹುಚ್ಚು ಹಿಡಿಸಿದೆ.ಅದರಲ್ಲೂ ಇಲ್ಲೊಬ್ಬ ರೈತ ಇಂಡಿಯಾ ಮ್ಯಾಚ್ ಅಂದ್ರೆ ಅವತ್ತು ಅವನಿಗೆ ಸರಕಾರಿ ರಜೆ ಇದ್ದಂಗಂತ ಅದಕ್ಕ ಆ ರೈತ ದೇಶದ ಬಗ್ಗೆ ಇಟ್ಟ ಅಭಿಮಾನ ಎಂತಹದ್ದ ನೀವೇ ನೋಡ್ರಿ..

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕೆ.ಹುಣಸಿಕಟ್ಟಿ ಗ್ರಾಮದ ಶೇಖರಯ್ಯ ಎಂಬುವರು ಇಂಡಿಯಾ ಮ್ಯಾಚ್ ಇದ್ದ ದಿನ ನಮಗೆ ಸರಕಾರಿ ರಜೆನೇ ನಮ್ಮ ಕೆಲಸ ಬೇಕಾದಷ್ಟು ಇರಲಿ ಅವತ್ತು ಎಲ್ಲಾ ಕೆಲಸ ಬಿಟ್ಟು ಟಿವಿ ಮುಂದೆ ಕುಳಿತಿಕೊಳ್ಳುದು ಅಂತಾ ಹೇಳತಾನೆ.

ಅಲ್ಲದೇ ಇಂಡಿಯಾದವರ ಆಟ ನಮಗೆ ಮನಸ್ಸಿಗೆ ಬಂದೈತ್ರಿ.ಪೈನಲ್ ಮ್ಯಾಚ್ ಇಂಡಿಯಾದವರು ಗೆಲ್ಲ ಬೇಕ್ರೀ ಹಾಗಂತ ನಾವ ಪರಮಾತ್ಮನ ಹತ್ತಿರ ಬೇಡಿಕೊಳ್ಳತೇವ್ರೀ ಅನ್ನೋ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author