ಗಜಪ್ರಸವದಲ್ಲಿ ಕೊನೆಗೂ ವಿರೋಧ ಪಕ್ಷದ ನಾಯಕನ ಆಯ್ಕೆ.
ಗೌಡ – ಲಿಂಗಾಯತರ ಮತಬ್ಯಾಂಕ್ ಮೇಲೆ ಬಿಜೆಪಿ ಕಣ್ಣು
ಆರ್ ಆಶೋಕ ವಿರೋಧಪಕ್ಷದ ನಾಯಕ
ಬೆಂಗಳೂರು:-ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ವರಿಷ್ಠರು ಲಿಂಗಾಯತ ದಾಳದ ನಂತರ ಗೌಡ ದಾಳ ಬೀಸಿದ್ದಾರೆ. ಬಿ ಎಸ್ ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ ಎಂಬ ಸತ್ಯದ ಅರವಿನ ನಂತ್ರ ಮಾಸ್ ಲೀಡರ್ ವಿಜಯೇಂದ್ರ ಅವರಿಗೆ ಬಿಜೆಪಿ ಅಧ್ಯಕ್ಷ ಪಟ್ಟಗಟ್ಟಲಾಯ್ತು. ಇದೀಗ ಹಳೇ ಮೈಸೂರು ಭಾಗದಲ್ಲಿ ಪ್ರಭಾವಿಯಾಗಿರುವ ಗೌಡ ಮತಗಳನ್ನು ಸೆಳೆಯಲು ಬಿಜೆಪಿ ವರಿಷ್ಠರು ಆರ್ ಅಶೋಕಗೆ ವಿರೋಧಪಕ್ಷದ ಸ್ಥಾನ ನೀಡುವ ಮೂಲಕ ಪ್ರಾದೇಶಿಕ ಮತಬ್ಯಾಂಕ್ ಸೃಷ್ಠಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಗಳು ಈಗಾಗಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿರುವಾಗಲೇ ವಿರೋಧ ಪಕ್ಷದ ನಾಯಕನ ಆಯ್ಕೆ ಮತ್ಯಾವ ತಿರುವ ಪಡೆಯಲಿದೆ ಅನ್ನುವದನ್ನು ಕಾದು ನೋಡಬೇಕಾಗಿದೆ
ಉದಯ ವಾರ್ತೆ ಬೆಂಗಳೂರು.