ಜೈಲಿಗೆ ಹೋಗಿ ಹೊರಬಂದರು ಬುದ್ದಿ ಕಲಿಯದ ಖದೀಮರು. ಉಂಡ ಮನೆಗೆ ಸ್ಕೇಚ್ ಆಗಿ ಕೋಟಿ ಕೋಟಿ ರೂಪಾಯಿ ಚಿನ್ನ ಕಳ್ಳತನ. ಗೆಳೆಯರಿಬ್ಬರ ಭೇಟಯಾಡಿದ ಪೋಲೀಸರು.

Share to all

ಜೈಲಿಗೆ ಹೋಗಿ ಹೊರಬಂದರು ಬುದ್ದಿ ಕಲಿಯದ ಖದೀಮರು. ಉಂಡ ಮನೆಗೆ ಸ್ಕೇಚ್ ಆಗಿ ಕೋಟಿ ಕೋಟಿ ರೂಪಾಯಿ ಚಿನ್ನ ಕಳ್ಳತನ. ಗೆಳೆಯರಿಬ್ಬರ ಭೇಟಯಾಡಿದ ಪೋಲೀಸರು.

ಬೆಂಗಳೂರು –

ಅವರಿಬ್ಬರಿಗೆ ಜೈಲ್ ಅಂದರೆ ಪಂಚ ಪ್ರಾಣ.ಈಗಾಗಲೇ ಹಲವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿದ್ದರು. ಕಳ್ಳತನ ಮಾಡುವುದನ್ನ ಮಾತ್ರ ಬಿಟ್ಟಿರಲಿಲ್ಲಾ.ಕಳ್ಳತನ ಮಾಡುವುದು ಸಿಕ್ಕಿಬಿದ್ದರೆ ಜೈಲಿಗೆ ಹೋಗೋದು.ಮತ್ತೇ ಜಾಮೀನಿನ ಮೇಲೆ ಹೊರಗೆ ಬರುತ್ತಿದ್ದರು ಹೀಗೆ ಮಾಡುತ್ತಾ ಮಾಡುತ್ತಾ ಮತ್ತೊಂದು ದೊಡ್ಡ ಪ್ರಮಾಣದಲ್ಲಿ ಕಳ್ಳತನ ಮಾಡಿ ನಾಪತ್ತೆಯಾಗಿದ್ದ ಖದೀಮರಿಬ್ಬರನ್ನು ಬೆಂಗಳೂರಿನಲ್ಲಿ ಬಂಧನ ಮಾಡಲಾಗಿದೆ.

ಹೌದು ಕೋಟ್ಯಂತರ‌ ರೂಪಾಯಿ‌ ಮೌಲ್ಯದ ಚಿನ್ನ ಕದ್ದಿದ್ದ ಖದೀಮರಿಬ್ಬರನ್ನು ಬಂಧನ ಮಾಡಲಾಗಿದೆ.ಕೋಟ್ಯಂತರ‌ ರೂಪಾಯಿ‌ ಮೌಲ್ಯದ ಚಿನ್ನ ಕದ್ದಿದ್ದ ಇಬ್ಬರು ಖದೀಮರನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಪುರಾತನ ಕಾಲದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನ ಮೂಲದ ಕೇತುರಾಮ್ ಮತ್ತು ಈತನ ಸ್ನೇಹಿತ ರಾಕೇಶ್ ಬಂಧಿತ ಆರೋಪಿಗಳಾಗಿದ್ದಾರೆ.

ಇನ್ನೊರ್ವ ಆರೋಪಿ ಶ್ಯಾಮ್ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧವನ್ನು ಮಾಡುತ್ತಿದ್ದಾರೆ.ಬಂಧಿತರಿಂದ 1.2 ಕೋಟಿ ರೂ.ಬೆಲೆ ಬಾಳುವ 1.624 ಕೆಜಿ ಚಿನ್ನ,6.455 ಕೆಜಿ ಬೆಳ್ಳಿ ಹಾಗೂ 5.50 ಲಕ್ಷ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ರಾಜಸ್ಥಾನ ಮೂಲದ ಮೂವರು ಆರೋಪಿಗಳು ಸಂಚು ರೂಪಿಸಿ ಅಕ್ಟೋಬರ್​ 10 ರಂದು ನಗರದಲ್ಲಿರುವ ಕಾಂಚನಾ ಜ್ಯುವೆಲರ್ಸ್‌ ಅಂಗಡಿಯಲ್ಲಿದ್ದ ಪುರಾತನ ಚಿನ್ನ ಮತ್ತು ಚಿನ್ನದ ವಸ್ತುಗಳನ್ನು ಕಳ್ಳತನ ಮಾಡಿದ್ದರು.ಈ ಸಂಬಂಧ ಅಂಗಡಿ ಮಾಲೀಕ ಅರವಿಂದ್ ಕುಮಾರ್ ತಾಡೆ ದೂರನ್ನು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಮಾಲಿಕರ ಕಣ್ತಪ್ಪಿಸಿ ಕೀ ಕಳ್ಳತನ ಮಾಡಿದ್ದರು ಆರೋಪಿಗಳು ಕೆಲಸಕ್ಕಾಗಿ ಅಲೆಯುತ್ತಿದ್ದ ಆರೋಪಿ ಕೇತರಾಮ್​ನನ್ನು ಅಂಗಡಿ ಮಾಲೀಕರು ಒಂದು ತಿಂಗಳು ಹಿಂದೆ ಮನೆ ಮತ್ತು ಕ್ಲಿನಿಂಗ್ ಮಾಡುವ ಕೆಲಸಕ್ಕೆ ನೇಮಿಸಿಕೊಂಡಿದ್ದರು.

ಮಾಲೀಕರು ರಾಜಸ್ಥಾನದವರಾಗಿದ್ದು ತಮ್ಮ ಪಕ್ಕದ ಊರಿನ ನಿವಾಸಿಯಾದ ಕೇತರಾಮ್ ನಂಬಿಕೆ ಇಟ್ಟು ಕೆಲಸಕ್ಕೆ ನೇಮಿಸಿಕೊಂಡಿದ್ದರು.ಮನೆ ಕ್ಲೀನಿಂಗ್ ಮಾಡುವಾಗ ಮಾಲೀಕರು ಅಂಗಡಿಯ ಕೀ ಇಡುವ ಜಾಗವನ್ನು ಗಮನಿಸಿದ್ದ.ಮಾಲೀಕರು ಊರಿಗೆ ಹೋಗುವ ಹಿಂದಿನ ದಿನ ಅವರ ಕಣ್ತಪ್ಪಿಸಿ ಅಂಗಡಿಯ ಕೀ ಮತ್ತು ಲಾಕರ್‌ಗಳ ಕೀ ಕಳ್ಳತನ ಮಾಡಿದ್ದರು.

ಮಾಲೀಕ ಅರವಿಂದ್ ಅ.29 ರಂದು ತಮ್ಮ ಕುಟುಂಬದೊಂದಿಗೆ ಹಬ್ಬಕ್ಕಾಗಿ ಮುಂಬೈಗೆ ಹೋದಾಗ ಆರೋಪಿ ಕೇತರಾಮ್ ರಾಜಸ್ತಾನದಿಂದ ರಾಕೇಶ್ ಹಾಗೂ ಶ್ಯಾಮ್ ಎಂಬ ಸ್ನೇಹಿತರನ್ನು ಕರೆಸಿಕೊಂಡು ಅರವಿಂದ್ ಅವರ ಅಂಗಡಿಯಿಂದ ಚಿನ್ನಾಭರಣ,ಬೆಳ್ಳಿ ವಸ್ತುಗಳನ್ನು ಹಾಗೂ ನಗದು ಲಪಟಾಯಿಸಿದ್ದನು.ಈ ಒಂದು ಕಳ್ಳತನವನ್ನು ಗಮನಿಸಿದ ಅಕ್ಕಪಕ್ಕದ ಅಂಡಿಯವರು ಕರೆ ಮಾಡಿ ತಿಳಿದ ಹಿನ್ನೆಲೆಯಲ್ಲಿ ಕೂಡಲೇ ಊರಿನಿಂದ ವಾಪಸ್ ಬಂದ ಮಾಲೀಕರು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ರಾಕೇಶ್ ವಿರುದ್ಧ ಸಿಟಿ ಮಾರುಕಟ್ಟೆ,ಹಲಸೂರು,ವರ್ತೂರು,ಬ್ಯಾಡರಹಳ್ಳಿ,ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ಮನೆ ಕಳ್ಳತನ, ಎನ್‌ಡಿಪಿಎಸ್ ಕಾಯ್ದೆ ಅಡಿ ಸೇರಿ ಹಲವು ಪ್ರಕರಣ ದಾಖಲಾಗಿವೆ.ಬಂಧನಕ್ಕೊಳಗಾಗಿ ಜೈಲಿಗೆ ಹೋಗಿ ಬಂದಿದ್ದರು ಕೂಡಾ ಬುದ್ದಿ ಕಲಿಯದ ಆರೋಪಿಗಳು ಮತ್ತೆ ಜೈಲು ಸೇರಿದ್ದಾರೆ.

ಉದಯ ವಾರ್ತೆ ಬೆಂಗಳೂರು.


Share to all

You May Also Like

More From Author