ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಕಾರು ಅಪಘಾತ.
ವಿಜಯಪುರ:-ಸಿಂದಗಿ ಬೈಪಾಸದ ಬಳಿ ಬೈಕ್ ತಪ್ಪಿಸಲು ಹೋಗಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಕಾರು ಅಪಘಾತವಾಗಿದೆ.
ವೀಣಾ ಕಾಶಪ್ಪನವರ ಕಾರಿಗೆ ಬೈಕೊಂದು ಅಡ್ಡಲಾಗಿ ಬಂದ ಹಿನ್ನೆಲೆಯಲ್ಲಿ ಆ ಬೈಕ್ ತಪ್ಪಿಸಲು ಹೋಗಿ ಕಾರು ಅಪಘಾತವಾಗಿದೆ.
ಅಪಘಾತದಲ್ಲಿ ವೀಣಾ ಕಾಶಪ್ಪನವರ ಕೈಗೆ ಪೆಟ್ಟಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಲ್ಲದೇ ಕಾರಿನಲ್ಲಿದ್ದ ಇನ್ನೂ ಮೂವರಿಗೂ ಗಾಯವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ.
ಉದಯ ವಾರ್ತೆ ವಿಜಯಪುರ