!!!ಪೋಲೀಸರಿಂದಲೇ ಅಕ್ರಮ ದಂಧೆಗೆ ಸಾಥ್.ಆ ಠಾಣೆಯಲ್ಲಿ ಎಲ್ಲವೂ ಹರ ಹರ ಪರಮೇಶ.!!!
ಹುಬ್ಬಳ್ಳಿ:- ಧಾರವಾಡ ಜಿಲ್ಲೆಯ ಕುಂದಗೋಳ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ದಂಧೆಗಳಿಗೆ ಪೋಲೀಸರೇ ಸಾಥ್ ನೀಡಿರುವ ಕುರಿತು ಇಡೀ ತಾಲೂಕಿನ ಜನನೇ ಖುಲ್ಲಂ ಖುಲ್ಲಾ ಮಾತಾಡತಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಗೆ ಮುರಗೇಶ.ಚನ್ನಣ್ಣವರ ಪಿ.ಆಯ್ ಆಗಿ ಬಂದ ದಿನದಿಂದ ಇಲ್ಲಿಯವರೆಗೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಇಸ್ಪೀಟ,ಮಟ್ಕಾ ದಂಧೆಗಳಿಗೆ ಸಿಂಹಸ್ವಪ್ನನರಾದರೋ ಅವಾಗಲೇ ಅಕ್ರಮ ದಂಧೆಕೋರರು ಗ್ರಾಮೀಣ ಠಾಣಾ ವ್ಯಾಪ್ತಿ ಬಿಟ್ಟು ಕುಂದಗೋಳ ಕಡೆ ಕಾಲಕಿತ್ತರು.
ಕುಂದಗೋಳಕ್ಕೆ ಪಿಆಯ್ ಆಗಿ ಬಂದ ಸಾಹೇಬರಿಗೆ ಕುಂದಗೋಳ ಹೊಸದು. ಅದನ್ನೇ ಬಂಡವಾಳ ಮಾಡಿಕೊಂಡ ಅಲ್ಲಿಯ ಪರಮಾತ್ಮ ಪೇದೆ.ಎಲ್ಲವನ್ನೂ ಸಾಹೇಬರ ಗಮನಕ್ಕೆ ತರದೇ ತಾನ ಆಡಿದ್ದೇ ಆಟ ಅಂತ ಅಕ್ರಮ ದಂಧೆಗೆ ಓಪನ್ ಫರ್ಮಿಶನ್ ಕೊಟ್ಟು ವಾರಕ್ಕೊಂದು ಸಲ.ತಿಂಗಳಿಗೊಂದು ಸಲ ಪ್ರಸಾದ ತಿಂದು ಪಿಆಯ್ ಬಾಯಿಗೆ ಒರೆಸುವ ಪ್ರಯತ್ನ ಮಾಡುತ್ತಿರುವುದು ಗುಟ್ಟಾಗೇನು ಉಳಿದಿಲ್ಲಾ.
ಕುಂದಗೋಳ ತಾಲೂಕಿನಾದ್ಯಂತ ಮಟ್ಕಾ ದಂಧೆಯಂತೂ ಎಗ್ಗಿಲ್ಲದೇ ನಡೆಯುತ್ತಿದೆ.ಕಮಡೊಳ್ಳಿಯ ಪರಸ್ಯಾ ಎಂಬುವನೇ ಕಿಂಗ್ ಪಿನ್ ಆ ಕಿಂಗ್ ಪಿನ್ ಒಂದು ತಿಂಗಳಿಗೆ ಪ್ರಸಾದ ರೂಪದಲ್ಲಿ ಪರಮಾತ್ಮನ ಕೈಯಲ್ಲಿ ಒಂದೂವರೆ ಲಕ್ಷ .ಪರಮಾತ್ಮನ ಆಶೀರ್ವಾದ ಪಡೆದುಕೊಂಡು ಹೋಗತಾನೆ.
ಇನ್ನೂ ಎರಡು ಕಡೆ ಪರಮಾತ್ಮನ ಕ್ರಪಾಕಟಾಕ್ಷೆಯಿಂದ ಇಸ್ಪೀಟ ಅಡ್ಡಾಗಳಂತೂ ಓಪನಿಂಗ್ ಆಗಿವೆ.ಅದರಲ್ಲಿ ಒಂದು ಅಡ್ಡಾದಿಂದ ವಾರಕ್ಕೆ ಹತ್ತು ಸಾವಿರ ಇನ್ನೊಂದು ಅಡ್ಡಾದಿಂದಲೂ ಪ್ರಸಾದದ ರೂಪದಲ್ಲಿ ಪರಮಾತ್ಮನ ಕಿಸೆಗೆ ಬೀಳುತ್ತೇ.ಆದರೆ ಸುನೀಲ,ಶಂಕ್ರ,ಲೋಕಿಯ ಟೀಮಿನ ಅಡ್ಡಾ ಕಳೆದ ಒಂದು ವಾರದಿಂದ ಪರಮಾತ್ಮ ಬಂದ್ ಮಾಡಲು ಹೇಳಿದ್ದಾನೆ.
ಇನ್ನೂ ಅಕ್ರಮ ಸರಾಯಿ ಅಂತೂ ಪ್ರತಿ ಹಳ್ಳಿಯಲ್ಲೂ ಕಿರಾಣಿ ಅಂಗಡಿಗಳಂತೆ ತಲೆ ಎತ್ತಿವೆ.ಅವುಗಳ ಪ್ರಸಾದ ಒಟ್ಟಾಗಿ ಬಾರ್ ಅಂಗಡಿಗಳ ಮೂಲಕವೇ ತಲುಪುತ್ತೇ.
ಈ ಒಂದು ಪರಮಾತ್ಮನ ಸಂದಿ ಗೊಂದಿಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಯ ಅಸಲಿಯತ್ತನ್ನ ಉದಯ ವಾರ್ತೆ ಸಂಪೂರ್ಣವಾಗಿ ಬಯಲಿಗೆಳೆಯಲಿದೆ.
ಜಿಲ್ಲೆಯಾದ್ಯಂತ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವಂತೆ ಜಿಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಖಡಕ್ ವಾರ್ನಿಂಗ್ ಕೊಟ್ಟಿದ್ದರೂ ಕುಂದಗೋಳದಲ್ಲಿ ಮಾತ್ರ ಸಚಿವರ ಸೂಚನೆಗೆ ಪೋಲೀಸರು ಕ್ಯಾರೆ ಎನ್ನದೇ ತಾವಾಯ್ತು ತಮ್ಮ ದಂಧೆಯಾಯ್ತು ಎನ್ನುತ್ತಾ ದಂಧೆ ಮುಂದುವರೆಸಿದ್ದಾರೆ.ಈಗಲಾದರೂ ಸಚಿವರು ಅಕ್ರಮ ದಂಧೆಯ ಕಡೆ ಗಮನಹರಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಕೊಳ್ಳತಾರಾ ಕಾದು ನೋಡಬೇಕಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ