ವ್ಯಾಪಾರಿ ವಿಜಯ ಅಳಗುಂಡಗಿ ಸೇರಿ ಏಳು ಜನರ ಮೇಲೆ ಬಿತ್ತು. ಅಲ್ಟ್ರಾಸಿಟಿ ಕೇಸ್. ಪ್ಲಾಸ್ಟಿಕ್ ಧಂಗಲ್.

Share to all

ವ್ಯಾಪಾರಿ ವಿಜಯ ಅಳಗುಂಡಗಿ ಸೇರಿ ಏಳು ಜನರ ಮೇಲೆ ಬಿತ್ತು. ಅಲ್ಟ್ರಾಸಿಟಿ ಕೇಸ್.ಇದು ಪ್ಲಾಸ್ಟಿಕ್ ಧಂಗಲ್.

ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ದಂಧೆಯ ಧಂಗಲ್ ಆರಂಭವಾಗಿದೆ.

ನವ್ಹಂಬರ ಒಂದರಂದು ಕನ್ನಡಪರ ಸಂಘಟನೆಯ ಜಿಲಾದ್ಯಕ್ಷರು ಸೇರಿದಂತೆ ಹಲವರು ಸೇರಿಕೊಂಡು ಹುಬ್ಬಳ್ಳಿಯ ಅಕ್ಕಿಹೊಂಡದ ಭರತ್ ಜೈನ ಅವರ ಗೊಡೌನದಲ್ಲಿ ಹತ್ತು ಟನ್ ಗೂ ಹೆಚ್ಚು ನಿಷೇಧಿತ ಪ್ಲಾಸ್ಟಿಕ್ ಇದೆ ಎಂದು ಪಾಲಿಕೆಯ ಅಧಿಕಾರಿಗಳು ಹಾಗೂ ಪೋಲೀಸರೊಂದಿಗೆ ಹೋಗಿ ಗೋಡೌನ ಸೀಜ್ ಮಾಡಿಸಿದ್ದರು.

ಅಲ್ಲಿಂದ ಆರಂಭವಾಯಿತು ಈ ಪ್ಲಾಸ್ಟಿಕ್ ಸದ್ದು.ಗೋಡೌನ್ ಸೀಜ್ ಆಗತಿದ್ದಂತೆ.ಎರಡ್ಮೂರು ದಿನಗಳ ನಂತರ ವ್ಯಾಪಾರಿ ವಿಜಯ ಅಳಗುಂಡಗಿ ಹುಬ್ಬಳ್ಳಿಯ ಟೌನ್ ಪೋಲೀಸ ಠಾಣೆಯಲ್ಲಿ ಕರವೇ ಜಿಲ್ಲಾದ್ಯಕ್ಷ ಸೇರಿ ಎಂಟು ಜನರ ಮೇಲೆ ಸಚಿವರ ಹೆಸರಿನಲ್ಲಿ ಬೆದರಿಕೆ ಹಾಕಿ ಹಣ ಕೇಳಿದ್ದಾರೆ ಎಂದು ದೂರು ದಾಖಲು ಮಾಡಿದ್ದರು.

ಇಂದು ಘಂಟಿಕೇರಿಯ ಪೋಲೀಸ ಠಾಣೆಯಲ್ಲಿ ಕರವೇ ಸಂಘಟನೆಯ ಪ್ರವೀಣ ಗಾಯಕವಾಡ ಎಂಬುವರು ವಿಜಯ ಅಳಗುಂಡಗಿ.ಶಿವಾನಂದ ಮುತ್ತಣ್ಣವರ,ಡಾ:ವಿಜಯ ಅಪ್ಪಾಜಿ,ಭರತ ಜೈನ್,ಲಲಿತ ಜೈನೆ ಸೇರಿದಂತೆ ಏಳು ಜನರ ಮೇಲೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಈ ನಿಷೇಧಿತ ಪ್ಲಾಸ್ಟಿಕ್ ಧಂದೆಯ ಧಂಗಲ್ ಈಗ ಆರಂಭವಷ್ಟೇ ಅಂತ್ಯದೊಳಗೆ ಯಾರು..ಯಾರು ಬರತಾರೆ ಕಾದು ನೋಡಬೇಕಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author