ಗ್ರಾಮ ಪಂಚಾಯತಿ ಸದಸ್ಯನ ಭೀಕರ ಕೊಲೆ.ನಡುರಸ್ತೆಯಲ್ಲಿ ಅನಾಥ ಶವವಾಗಿತ್ತು ಜನಪ್ರತಿನಿಧಿಯ ದೇಹ..
ಹುಬ್ಬಳ್ಳಿ:ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮ ಇಂದು ಅಕ್ಷರಶಃ ಭಯಭೀತವಾಗಿತ್ತು.
ಗ್ರಾಮ ಪಂಚಾಯತಿ ಸದಸ್ಯ ನಿಂಗಪ್ಪ ದಾಸಪ್ಪನವರ ಅವರನ್ನು ನಡು ರಸ್ತೆಯಲ್ಲಿಯೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಆಸ್ತಿ ವಿಚಾರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.ಸ್ಥಳಕ್ಕೆ ಕಲಘಟಗಿ ಪೋಲೀಸರು ಭೇಟಿ ನೀಡಿ ಕೊಲೆಗೆ ಕಾರಣ ಹಾಗೂ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಉದಯ ವಾರ್ತೆ ಕಲಘಟಗಿ