!!!ಕುಂದಗೋಳ ಅಕ್ರಮ ದಂಧೆ ಕಣ್ಮುಚ್ಚಿ ಕುಳಿತ ಶಾಸಕರು.
ಶಾಸಕರೇ ಬೀದಿ ಬೀದಿಯಲ್ಲಿ ದಂಧೆ.ಕಣ್ಣಿದ್ದು ಕುರುಡರಾದರೇ ಶಾಸಕರು.!!
ಕುಂದಗೋಳ:- ಕುಂದಗೋಳ ತಾಲೂಕಿನದ್ಯಂತ ಅಕ್ರಮ ದಂಧೆಗೆ ಪೋಲೀಸರೇ ಸಾಥ ನೀಡಿದ್ದಾರೆ ಎನ್ನುವುದು ಈಗ ಜಗಜ್ಜಾಹೀರ ಆಗಿದೆ.ಮಟ್ಕಾ ದಂಧೆಗೆ ತಿಂಗಳಿಗೆ ಒಂದೂವರೆ ಲಕ್ಷ.ಗ್ಯಾಮಲಿಂಗ್ ಗೆ ವಾರಕ್ಕೆ ಹತ್ತು ಸಾವಿರ ಎಲ್ಲವೂ ಖುಲ್ಲಂ ಖುಲ್ಲಾ.
ಸರಳ,ಸಜ್ಜನಿಕೆಯ ಶಾಸಕ ಎಂ.ಆರ್ ಪಾಟೀಲ ಸಾಹೇಬ್ರೇ ಒಂದ್ಸಲವಾದರೂ ಕೆಡಿಪಿ ಮೀಟಿಂಗ್ ನಲ್ಲಿ ಪೋಲೀಸರ ಕಾರ್ಯವೈಕರಿಯ ಬಗ್ಗೆ ಕೇಳಿದ್ದೀರಾ.
ಕಳೆದ ಎರಡ್ಮೂರು ಜಿಲ್ಲಾ ಕೆಡಿಪಿ ಮೀಟಿಂಗ್ ನಲ್ಲಿ ಓಪನ್ ಆಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಜಿಲ್ಲೆಯಲ್ಲಿ ನಡೆಯುವ ಅಕ್ರಮ ದಂಧೆಗೆ ಕಡಿವಾಣ ಹಾಕಿ ಎಂದು ಸೂಚನೆ ಕೊಟ್ಟಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಗೆ ಕುಂದಗೋಳದಲ್ಲಿ ಮಾತ್ರ ಪೋಲೀಸರು ಕ್ಯಾರೆ ಎನ್ನುತ್ತಿಲ್ಲಾ.ಏನೇನು ನಡೆಯಬಾರದು ಅದು ಎಲ್ಲವೂ ಕುಂದಗೋಳದಲ್ಲಿ ನಡೆಯುತ್ತೇ.
ಶಾಸಕ ಎಂ.ಆರ್.ಪಾಟೀಲರು ಈಗಲಾದರೂ ಈ ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ಪೋಲೀಸರ ಮೇಲೆ ಕ್ರಮ ಕೈಕೊಳ್ಳದಿದ್ದರೆ ತಾಲೂಕಿನ ಮಾನ ಮರ್ಯಾದೆಯನ್ನು ಹರಾಜು ಹಾಕುವುದಂತೂ ಸತ್ಯ.
ಅಕ್ರಮ ದಂಧೆಯಲ್ಲಿ ಭಾಗಿಯಾಗಿರುವ ಪೋಲೀಸರನ್ನ ತಕ್ಷಣ ಸಸ್ಪೆಂಡ್ ಮಾಡಿಸಿ ತನಿಖೆ ಮಾಡಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಉದಯ ವಾರ್ತೆ ನಿನ್ನೆ ಪೋಲೀಸರಿಂದಲೇ ಅಕ್ರಮ ದಂದೆಗೆ ಸಾಥ ಎಂದು ವರದಿ ಮಾಡಿತ್ತು.ವರದಿ ಬಂದು ಮೂವತ್ತು ಘಂಟೆ ಕಳೆದರೂ ಹಿರಿಯ ಅಧಿಕಾರಿಗಳು ಮಾತ್ರ ಈವರೆಗೂ ಏನು ಕ್ರಮ ಕೈಕೊಳ್ಳದಿರುವುದು ಅನುಮಾನ ಹುಟ್ಟುಹಾಕಿದೆ.
ಈಗಲಾದರೂ ಶಾಸಕರು ತಕ್ಷಣ ಪೋಲೀಸ ಅಧಿಕಾರಿಗಳ ಸಭೆ ಕರೆದು ತಪ್ಪಿತಸ್ಥರ ಮೇಲೆ ಕ್ರಮಕೈಕೊಳ್ಳಲಿ ಎನ್ನೋದು ಉದಯ ವಾರ್ತೆಯ ಆಶಯ.
ಉದಯ ವಾರ್ತೆ ಕುಂದಗೋಳ