ಹುಬ್ಬಳ್ಳಿ-ಧಾರವಾಡದಲ್ಲಿ ಪಾಲಿಕೆಯ ಆಯುಕ್ತರ ಮಿಂಚಿನ ಸಂಚಾರ.ನೀರು ಪೋರೈಕೆಯ ಪರಿಶೀಲನೆ.
ಹುಬ್ಬಳ್ಳಿ:- ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ:ಈಶ್ವರ ಉಳ್ಳಾಗಡ್ಡಿ ಅವರು ಮಿಂಚಿನ ಸಂಚಾರ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಇಂದು ಬೆಳಿಗ್ಗೆ ಧಾರವಾಡದ ವಾಡ್೯ 25 ರ ತಡಸಿನಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರು ಪರಿಶೀಲನೆ ನಡೆಸಿ ನೀರು ಪೋರೈಕೆ ಮತ್ತು ಕ್ಲೀನಿಂಗ್ ಬಗ್ಗೆ ನಿರ್ದೇಶನ ನೀಡಿದರು.
ಅಲ್ಲದೇ ಧಾರವಾಡದ ಜನ್ನತನಗರದಲ್ಲಿ ಸಾರ್ವಜನಿಕ ಶೌಚಾಲಯದ ಸ್ವಚ್ಛತೆಯನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸ್ವಚ್ಛತೆ ಬಗ್ಗೆ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯ ವಾಡ್೯ ನಂಬರ ಹತ್ತರ ಸದರ ಸೋಪಾಗೆ ಭೇಟಿ ನೀಡಿ ಹಳೆಯದಾದ ವ್ಯಾಯಾಮ ಶಾಲೆಗೆ ಭೇಟಿ ನೀಡಿ ಸ್ಟೆಬಿಲಿಟಿ ಪರಿಶೀಲಿಸಿದರು.
ಒಟ್ಟಿನಲ್ಲಿ ಆಯುಕ್ತರ ದಿಢೀರ್ ಭೇಟಿ ಕೆಲವು ಅಧಿಕಾರಿಗಳು ಏನಪ್ಪ ಸಾಹೇಬ್ರು ಅಂತಾ ಹುಬ್ಬೇರಿಸಿದ್ದಂತೂ ನಿಜ.
ಉದಯ ವಾರ್ತೆ ಹುಬ್ಬಳ್ಳಿ