!!!ಹುಬ್ಬಳ್ಳಿಯಲ್ಲಿ ತಲೆ ಎತ್ತುತ್ತಿವೆ ಅಕ್ರಮ ವಾಣಿಜ್ಯ ಮಳಿಗೆಗಳು.
ಗೊತ್ತಿದ್ದರೂ ಕಣ್ಮುಚ್ಚಿ ಕುಳಿತ ಡಿಡಿಟಿಪಿ.!!!
ಹುಬ್ಬಳ್ಳಿ:-ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ರಸ್ತೆಗೆ ಹೊಂದಿಕೊಂಡಿರುವ “V” ಆಕಾರದ ಜಾಗೆಯಲ್ಲಿ ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ಕಟ್ಟಲು ಆರಂಭಿಸಿದ್ದಾರೆ.
ವಲಯ ಕಛೇರಿ 7 ರ ವಾಡ್೯ ನಂಬರ 51ರಲ್ಲಿ ಬರುವ ಕ್ರಷ್ಣಾಪುರ ಗ್ರಾಮದ ರಿ.ಸ.ನಂ 106/ಎ ದ್ದರಲ್ಲಿ ಮಹಾನಗರ ಪಾಲಿಕೆಯ ಪರವಾನಗಿ ಇಲ್ಲದೇ ಅನಧಿಕೃತ ಮಳೆಗೆಗಳನ್ನು ಕಟ್ಟುತ್ತಿದ್ದಾರೆ.
ಈ ಜಾಗೆಯು ತಾನಾಜೀ ರಾಮಚಂದ್ರ ಶಿಂಧೆ ಅನ್ನುವವರಿಗೆ ಸೇರಿದ್ದು ಅವರೇ ಈಗ ಈ ಜಾಗೆಯಲ್ಲಿ ಅನಧಿಕೃತ ವಾಗಿ ಹತ್ತಾರು ಮಳಿಗೆಗಳನ್ನು ಕಟ್ಟುತ್ತಿದ್ದಾರೆ.
ಸದರಿ ಜಾಗೆ 2031 ರ ಮಾಸ್ಟರ್ ಪ್ಲ್ಯಾನ್ ಪ್ರಕಾರ ಕಟ್ಟಡ ಬಿಲ್ಡಿಂಗ್ ಲೈನದಲ್ಲಿ(ಕಟ್ಟಡ ರೇಖೆ) ಬರುತ್ತೇ zonel regulation 2019 ರ ಪ್ರಕಾರ ಇಲ್ಲಿ ಕಟ್ಟಡ,ಮಳಿಗೆ,ಶೆಡ್ಡು ಏನೂ ನಿರ್ಮಾಣ ಮಾಡಲು ಬರುವುದಿಲ್ಲಾ.ಇಷ್ಟೆಲ್ಲಾ ಕಾನೂನು ಇದ್ದರೂ ಜನ ಮಾತ್ರ ಕಾನೂನು ಉಲ್ಲಂಘನೆ ಮಾಡತಾನೆ ಇದ್ದಾರೆ.ಆದರೆ ಪಾಲಿಕೆಯ ಡಿಡಿಟಿಪಿ ಮಾತ್ರ ಇಂತಹ ಅನಧಿಕೃತ ಕಟ್ಟಡದ ಬಗ್ಗೆ ಕ್ರಮಕೈಕೊಳ್ಳತಾ ಇಲ್ಲಾ.
ಜಾಗೆಯ ಮಾಲಿಕರು ಕಟ್ಟಡ ಪರವಾನಿಗೆಗೆ ಡಿಡಿಟಿಪಿಗೆ ಅರ್ಜಿಸಲ್ಲಿಸಿದ್ದರು.ಆದರೆ ಡಿಡಿಟಿಪಿ ಆ ಅರ್ಜಿಯನ್ನು ತಿರಸ್ಕರಿಸಿದೆ.ಪಾಲಿಕೆ ಅರ್ಜಿಯನ್ನು ತಿರಸ್ಕರಿಸಿದರೂ ಅವರು ಮಾತ್ರ ತಮ್ಮ ಕೆಲಸ ಮುಂದುವರಿಸಿದ್ದಾರೆ.
ಪಾಲಿಕೆಯ ಡಿಡಿಟಿಪಿ ಅರ್ಜಿ ತಿರಸ್ಕರಿಸಿದ ಮೇಲೆ ಅಲ್ಲಿ ಕಾಮಗಾರಿ ನಡೆದಿದ್ದರೂ ಸ್ಥಳ ಪರಿಶೀಲನೆ ಮಾಡಿಲ್ಲಾ.ಅವರಿಗೆ ನೋಟೀಸ್ ಕೊಟ್ಟಿಲ್ಲಾ ಅಂದರೆ ಅಧಿಕಾರಿಗಳು ಮಾಲಿಕರಿಗೆ ಮೌಖಿಕವಾಗಿ ಸೂಚನೆ ಕೊಟ್ಟರಾ ಎಂಬ ಸಂಶಯ ಮೂಡಿದೆ.
ಇದೆಲ್ಲದರ ಮದ್ಯೆ ಜೆಡಿಎಸ್ ಮುಖಂಡ ವಿನಾಯಕ ಬಂಡಿವಡ್ಡರ ವಲಯ ಕಛೇರಿಗೆ ಪತ್ರದ ಮೂಲಕ ಅಕ್ರಮ ಮಳೆಗೆ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು.ಇಲ್ಲದಿದ್ದರೆ ಹೋರಾಟ ಮಾಡುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಜಾಗೆಯ ಮಾಲಿಕರು ಯಾವುದಕ್ಕೂ ಕ್ಯಾರೆ ಎನ್ನದೇ ಅನಧಿಕೃತವಾಗಿ ಕೆಲಸ ನಡೆಸಿದ್ದಾರೆ.ಪಾಲಿಕೆಯ ಅಧಿಕಾರಿಗಳು ಈ ಮಳೆಗೆಗಳನ್ನು ತೆರವುಗೊಳಿಸತಾರ ಅಥವಾ ಹಾಗೆ ಸುಮ್ಮನೆ ಬಿಡತಾರಾ ಕಾದು ನೋಡಬೇಕಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ