ಹುಬ್ಬಳ್ಳಿಯಲ್ಲಿ ರೌಡಿಗಳಿಗೆ ಎಚ್ಚರಿಕೆ ಘಂಟೆ.ರೌಡಿಗಳನ್ನ ಮಟ್ಟ ಹಾಕ್ತೇವಿ ಕಮೀಷನರ್ ರೇಣುಕಾ ಸುಕುಮಾರ.
ಹುಬ್ಬಳ್ಳಿ: ಗುಂಡೇಟು ತಿಂದಿರುವವನು ನಟೋರಿಯಸ್ ರೌಡಿ ಶೀಟರ್.ಇವನ ಮೇಲೆ ಕೊಲೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳಿವೆ ಎಂದು ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ.
ಸತೀಶ ಗೋನಾ ಇವನೊಬ್ಬ ವಾರೆಂಟ್ ಆಸಾಮಿ.ಎರಡು ವರ್ಷದಿಂದ ತಲೆ ಮರೆಸಿಕೊಂಡಿದ್ದ ಇತ್ತೀಚೆಗೆ ನಾವು ರೌಡಿ ಶೀಟರ್ ಮೇಲೆ ನಿಗಾ ಇಟ್ಟಾಗ.ಈ ಸತೀಶ ಗೋನಾ ಮೇಲೆ ವಾರೆಂಟ್ ಎಕ್ಸಿಗ್ಯೂಟ್ ಮಾಡಲು ನಮ್ಮ ಪೋಲೀಸರು ಹೋಗಿದ್ದರು.
ಅವಾಗ ಸ್ಥಳ ಮಜರು ಮಾಡಲು ಮಂಟೂರ ರಸ್ತೆಗೆ ಹೋದಾಗ ನಮ್ಮ ಪಿಎಸ್ ಆಯ್ ಮೇಲೆ ಕಲ್ಲಿನಿಂದ ಹೊಡೆದು ತಪ್ಪಿಸಿಕೊಳ್ಳಲು ಹೋದಾಗ ಇನ್ಸ್ಪೆಕ್ಟರ್ ಪೈರ್ ಮಾಡಿದ್ದಾರೆ.
ಆರೋಪಿ ಕಲ್ಲಿನಿಂದ ಪಿಎಸ್ ಆಯ್ ವಿನೋದ ಮೇಲೆ ಹಲ್ಲೆ ಮಾಡಿರುವುದರಿಂದ ಪಿಎಸ್ ಆಯ್ ವಿನೋದಗೆ ತಲೆಗೆ ಪೆಟ್ಟಾಗಿದ್ದು ಅವರನ್ನು ಹಾಗೂ ಪಿಆಯ್ ಅವರನ್ನು ಕಿಮ್ಸಗೆ ದಾಖಲಿಸಿದ್ದೇವೆ ಎಂದು ಕಮೀಷನರ್ ಹೇಳಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ