ವಿದ್ಯಾನಗರ ಪೋಲೀಸರ ಕಾರ್ಯಾಚರಣೆ.ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ.
ಹುಬ್ಬಳ್ಳಿ:-ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳನನ್ನು ಹುಬ್ಬಳ್ಳಿ ವಿದ್ಯಾನಗರ ಪೋಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 2.60 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೈಕಗಳನ್ನ ಆರೋಪಿತ ಹುಬ್ಬಳ್ಳಿ, ಹಳಿಯಾಳ ಹಾಗೂ ಕಲಘಟಗಿಯಿಂದ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಒಂದು ಪ್ರಕರಣ ಪತ್ತೆ ಹಚ್ಚುವಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಮಂಜುನಾಥ.ಯಕ್ಕಡಿ,ಮಲ್ಲಿಕಾರ್ಜುನ ಧನಿಗೊಂಡ,ಪರಶುರಾಮ ಹಿರಗಣ್ಣವರ,ವಾಯ್.ಎಸ್.ಶೇಂಡ್ಗೆ,ಸೈದ ಅಲಿ ತಹಶೀಲ್ದಾರ.ರಮೇಶ ಹಲ್ಲೆ ಸೇರಿದಂತೆ ಹಲವು ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.
ಉದಯ ವಾರ್ತೆ ಹುಬ್ಬಳ್ಳಿ.