ಸಾಲದ ಬಾಧೆ ತಾಳಲಾರದೇ ಒಂದೇ ಕುಟುಂಬದ ಐವರ ಸಾವು.ಸಾಯುವ ಮುನ್ನ ಹೋಮ್ ಮಿನಿಸ್ಟರಗೆ ಪತ್ರ.
ತುಮಕೂರ:-ಸಾಲಬಾಧೆ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಹ್ರದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಸದಾಸಿವನಗರದ ಮೆಳೆಕೊಟೆಯ ಮನೆಯಲ್ಲಿ ಗರೀಬಸಾಬ,ಸುಮಯಾ,ಹಾಜೀರಾ,ಶುಭಾನ್ ಮತ್ತು ಪಾಪು ಆತ್ಮಹತ್ಯೆಗೆ ಶರಣಾದವರು.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು ನಮ್ಮ ಸಾವಿಗರ ಸಾಲಗಾರರ ಕಾಟ ಮತ್ತು ನಾವು ಬಾಡಿಗೆ ಇರುವ ಮನೆಯ ಮೇಲೆ ಕೆಳಗಿರುವ ಐವರು ನಮ್ಮ ಸಾವಿಗೆ ಕಾರಣ ಅವರಿಗೆ ಹೋಮ್ ಮಿನಿಸ್ಟರ್ ಕ್ರಮಕೈಕೊಳ್ಳಬೇಕು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಮನೆಯ ಯಜುಮಾನ ಕಬಾಬ್ ಅಂಗಡಿ ನಡೆಸುತ್ತಿದ್ದ.ವ್ಯಾಪಾರ ಅಷ್ಟೇನು ಚೆನ್ನಾಗಿರಲಿಲ್ಲಾ.ಅಲ್ಲದೇ 75 ಸಾವಿರ ಸಾಲ ಮಾಡಿಕೊಂಡಿದ್ದ.ಅದಕ್ಕೆ ಅವರು ನಮಗೆ ಸಾಲಕ್ಕಾಗಿ ವಿಪರೀತ ಕಿರುಕುಳ ಕೊಟ್ಟಿದ್ದಾರೆ.ಅದಕ್ಕೆ ನಮ್ಮ ಸಾವಿಗೆ ಅವರೇ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ.
ಅಲ್ಲದೇ ನಮ್ಮ ದೇಹವನ್ನು ಪೋಸ್ಟ ಮಾಟಮ್ಮ ಮಾಡಬೇಡಿ ಎಂದು ಡೆತ್ ನೋಟನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಅವರ ಮನೆಯಲ್ಲಿಯ ಸಾಮಾನು ಮತ್ತು ಮನೆಯ ಡಿಪಾಜಿಟ್ ಯಾರಿಗೆ ಕೊಡಬೇಕೆಂದು ಬರೆದಿದ್ದಾನೆ.
ಸಾವಿಗೂ ಮುನ್ನ 5 ನಿಮಿಷ 22 ಸೆಕೆಂಡ ವಿಡಿಯೋ ಮಾಡಿ ಸಂಬಂಧಿಕರಿಗೆ ಕಳುಗಿಸಿದ್ದಾರೆ.
ಸ್ಥಳಕ್ಕೆ ತುಮಕೂರ ಎಸ್.ಪಿ ಅಶೋಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉದಯ ವಾರ್ತೆ ತುಮಕೂರು