ತವರು ಜಿಲ್ಲೆಯಲ್ಲಿ ಧಣಿವರಿಯದ ಜನ ನಾಯಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಹುಟ್ಟು ಹಬ್ಬಕ್ಕಾಗಿ ಹತ್ತಾರು ಅರ್ಥಪೂರ್ಣ ಕಾರ್ಯಕ್ರಮಗಳು – ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಯಾವ ಯಾವ ಕಾರ್ಯಕ್ರಮಗಳ ಮೂಲಕ ವಿಭಿನ್ನವಾಗಿ ಹುಟ್ಟು ಹಬ್ಬ ಆಚರಣೆ ಆಯಿತು ಕಂಪ್ಲೀಟ್ ಮಾಹಿತಿ
ಹುಬ್ಬಳ್ಳಿ –
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ 62ನೇ ಹುಟ್ಟು ಹಬ್ಬದ ಸಂಭ್ರಮ.ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಕರೆಯಿಸಿಕೊಳ್ಳುವ ಪ್ರಹ್ಲಾದ್ ಜೋಶಿಯವರು ತಮ್ಮ ಹುಟ್ಟು ಹಬ್ಬವನ್ನು ಯಾವಾಗಲೂ ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿಲ್ಲ.ನಾಯಕರೇ ಹೀಗಿರುವಾಗ ಇನ್ನೂ ಇವರೊಂದಿಗೆ ಇರುವ ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರು ಪ್ರಹ್ಲಾದ್ ಜೋಶಿಯವರ ಹುಟ್ಟು ಹಬ್ಬವನ್ನು ಜಿಲ್ಲೆಯಾಧ್ಯಂತ ಅದ್ದೂರಿಯಾಗಿ ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ಹೌದು ಪ್ರಹ್ಲಾದ್ ಜೋಶಿಯವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಾಧ್ಯಂತ ಸಮಾಜಕ್ಕೆ ಬೇಕಾದ ವಿಶೇಷವಾದ ಕಾರ್ಯಕ್ರಮಗಳು ಕಂಡು ಬಂದವು.ಹೌದು ಜನನಾಯಕರ ಹುಟ್ಟು ಹಬ್ಬವನ್ನು ಅವಳಿ ನಗರ ಸೇರಿದಂತೆ ಜಿಲ್ಲೆಯ ತುಂಬೆಲ್ಲಾ ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರು ಆಚರಣೆ ಮಾಡಿದ್ದು ಕಂಡು ಬಂದಿತು. ಹುಟ್ಟು ಹಬ್ಬಕ್ಕಾಗಿ ತವರು ಜಿಲ್ಲೆಯಲ್ಲಿ ಇಂದು ಹತ್ತಾರು ಅರ್ಥಪೂರ್ಣ ಕಾರ್ಯಕ್ರಮಗಳು ಅದರಲ್ಲೂ ಸಮಾಜಕ್ಕೆ ಅವಶ್ಯಕ ವಾಗಿರುವ ನಾಲ್ಕಾರು ಜನರು ಮೆಚ್ಚುವಂತಹ ಕಾರ್ಯ ಕ್ರಮಗಳು ಜಿಲ್ಲೆಯಾಧ್ಯಂತ ಕಂಡು ಬಂದವು.
ಇದರೊಂದಿಗೆ ಕೇಂದ್ರ ಸಚಿವರ ಹುಟ್ಟು ಹಬ್ಬವನ್ನು ಜಿಲ್ಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡಿದ್ದು ಕಂಡು ಬಂದಿತು.ಜಿಲ್ಲೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕು ಎಂಬ ಕನಸನ್ನು ಕಟ್ಟಿಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ 62 ವಸಂತಗಳನ್ನು ಪೊರೈಸಿದ್ದಾರೆ.ಹೀಗಾಗಿ ಇತ್ತ ಜಿಲ್ಲೆಯಲ್ಲಿ ಜನನಾಯಕನ ಹುಟ್ಟು ಹಬ್ಬದ ಆಚರಣೆಯನ್ನು ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ಕಾರ್ಯಕರ್ತರು ಅರ್ಥಪೂರ್ಣ ಕಾರ್ಯಕ್ರಮಳೊಂದಿಗೆ ಆಚರಿಸಿದರು.
ಹುಬ್ಬಳ್ಳಿ,ಧಾರವಾಡ,ಕುಂದಗೋಳ,ನವಲಗುಂದ,ಕಲಘಟಗಿ,ಸೇರಿದಂತೆ ಕಾರ್ಯಕರ್ತರು ರಕ್ತದಾನ,ಅಂಧ ಮಕ್ಕಳಿಗೆ ಊಟ,ಪುಸ್ತಕ,ಬಟ್ಟೆಗಳನ್ನು ವಿತರಣೆ ಮಾಡುವ ಮೂಲಕ ತಮ್ಮ ನಾಯಕನ ಹುಟ್ಟು ಹಬ್ಬ ಆಚರಣೆ ಮಾಡಿದರು
ಇದರೊಂದಿಗೆ ಜಿಲ್ಲೆಯ ತುಂಬೆಲ್ಲಾ ಇನ್ನೂ ಬೇರೆ ಬೇರೆ ಆರೋಗ್ಯ ಶಿಬಿರಗಳು ರಕ್ತದಾನ ಶಿಬಿರಗಳು ಕಣ್ಣೀನ ತಪಾಸನೆ ಆರೋಗ್ಯ ಮೇಳ ದಂತಹ ಕಾರ್ಯಕ್ರಮಗಳನ್ನು ಮಾಡಲಾಯಿತು ಇದರೊಂದಿಗೆ ತವರು ಜಿಲ್ಲೆಯಲ್ಲಿ ಜನನಾಯಕನ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.
ಇನ್ನೂ ಜಿಲ್ಲೆಗೆ ತ್ರಿಬಲ್ ಐಐಟಿ,ಐಐಟಿ,ವಿಮಾನ ನಿಲ್ದಾಣ ಮೇಲ್ದರ್ಜೆಗೆ,ರಿಂಗ್ ರೋಡ,ಪ್ಲೈ ಓವರ್ ,24/7 ಕುಡಿ ಯುವ ನೀರು,ಕಿಮ್ಸ್ ಸುಧಾರಣೆ,ಹಳ್ಳಿಗಳ ರಸ್ತೆ,ಬಣ್ಣ ದರ್ಪಣ ಸೇರಿದಂತೆ ಬೇರೆ ಬೇರೆ ಹತ್ತಾರು ಜನಪರ ಕಾರ್ಯಕ್ರಮಗಳನ್ನು ತಗೆದುಕೊಂಡು ಬಂದು ಜಿಲ್ಲೆಯ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಹೊಸ ನಾಂದಿ ಹಾಡಿದ್ದಾರೆ ಪ್ರಹ್ಲಾದ್ ಜೋಶಿಯವರು.ಇದಲ್ಲದೇ ಹಲವು ಯೋಜನೆ ಗಳಲ್ಲಿ ದಾಖಲೆ ಮಾಡಿದ ದಾಖಲೆ ಸರದಾರನಿಗೆ ತವರು ಕ್ಷೇತ್ರದಾದ್ಯಂತ ಇಂದು ಹುಟ್ಟು ಹಬ್ಬದ ಆಚರಣೆಯನ್ನು ಪಕ್ಷದ ಕಾರ್ಯಕರ್ತರು ಮುಖಂಡರು ನಾಯಕರು ಅಭಿಮಾನಿಗಳು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಣೆ ಮಾಡಿದ್ದು ಕಂಡು ಬಂದಿತು.
ಧಣಿವರಿಯದ,ಅಭಿವೃದ್ಧಿ ಕಾರ್ಯಗಳ ದಾಖಲೆಯ ಸರದಾರನಿಗೆ ಉದಯ ವಾರ್ತೆ ಯಿಂದಲೂ ಕೂಡಾ ಹುಟ್ಟು ಹಬ್ಬದ ಶುಭಾಶಯಗಳನ್ನು ಈ ಒಂದು ಸಮಯದಲ್ಲಿ ಕೋರುತ್ತೇವೆ.
ಉದಯ ವಾರ್ತೆ ಹುಬ್ಬಳ್ಳಿ