CM ಭೇಟಿಯಾದ ಶಾಸಕ NH ಕೋನರೆಡ್ಡಿ – ತುರ್ತಾಗಿ ಭೇಟಿಯಾಗಿ ಚರ್ಚೆ ಮಾಡಿದ್ದೇನು ಗೊತ್ತಾ…..
ಬೆಂಗಳೂರು –
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರೆಡ್ಡಿಯವರು ಭೇಟಿಯಾದರು.ಹೌದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ನಾಡದೊರೆಯವರನ್ನು ಭೇಟಿಯಾದ ಶಾಸಕರು ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದರು.ಹೌದು ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲನ್ನು ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಭೇಟಿಯಾಗಿ ಕ್ಷೇತ್ರದಲ್ಲಿನ ಕೆಲ ಅಭಿವೃದ್ದಿ ಕೆಲಸ ಕಾರ್ಯಗಳ ಕುರಿತಂತೆ ಚರ್ಚೆಯನ್ನು ಮಾಡಿದರು.
ಇದೇ ವೇಳೆ ನನಗೆ ನಿಗಮ ಮಂಡಳಿ ಬೇಡಾ ಒಂದ್ಸಲ ಕ್ರಷಿ ಮಂತ್ರಿ ಮಾಡಿ ರೈತರ ಬಗ್ಗೆ ನನಗೆ ಬಹಳ ಕಾಳಜಿ ಇದೆ.ರೈತರಿಗೆ ಏನಾದರೂ ಹೊಸ ಯೋಜನೆ ಕೊಡಬೇಕೆಂಬ ಕನಸು ಇದೆ ಅಂದಂರಂತೆ ಆಯ್ರು ಬಿಡಪ್ಪ ಕೋನರೆಡ್ಡಿ ನಿನ್ನನ್ನ ಮಂತ್ರಿ ಮಾಡೋಣ ಅಂತಾ ಸಿಎಂ ಹೇಳಿದರಂತೆ.
ಉದಯ ವಾರ್ತೆ ಬೆಂಗಳೂರು.