ಸರ್ಕಾರಿ ಬಸ್ ಇಲ್ಲವೇ ಪ್ರವಾಸೋದ್ಯಮ ವಾಹನಗಳಲ್ಲಿಯೇ ಶೈಕ್ಷಣಿಕ ಪ್ರವಾಸ – ಖಾಸಗಿ ವಾಹನ,ಮಿನಿ ಬಸ್ ಗಳಲ್ಲಿ ಪ್ರವಾಸ ಕೈಗೊಳ್ಳದಂತೆ ಸೂಚನೆ ನೀಡಿದ ಆಯುಕ್ತರು
ಬೆಂಗಳೂರು –
ಶೈಕ್ಷಣಿಕ ಪ್ರವಾಸಕ್ಕೆ ಮಕ್ಕಳನ್ನು ಸರ್ಕಾರಿ ಬಸ್ ಇಲ್ಲವೇ ಪ್ರವಾಸೋದ್ಯಮ ಇಲಾಖೆಯ ವಾಹನಗಳಲ್ಲಿಯೇ ಕರೆದುಕೊಂಡು ಹೋಗುವಂತೆ ಇಲಾಖೆಯ ಆಯುಕ್ತರು ಆದೇಶವನ್ನು ಮಾಡಿದ್ದಾರೆ.ಹೌದು ಈ ಒಂದು ವಿಚಾರ ಕುರಿತಂತೆ ಇತ್ತೀಚಿಗೆ ನಡೆದ ಕೆಲ ಘಟನೆಗಳು ಹಾಗೆ ಅವಘಡಗಳಿಂದ ಎಚ್ಚೇತ್ತುಕೊಂಡು ಆಯುಕ್ತರು ತುರ್ತಾಗಿ ಶೈಕ್ಷಣಿಕ ಪ್ರವಾಸಕ್ಕೆ ಹೊರಡುವ ರಾಜ್ಯದ ಸಮಸ್ತ ಶಿಕ್ಷಕರು ಮಕ್ಕಳನ್ನು ಸರ್ಕಾರಿ ಬಸ್ ಇಲ್ಲವೇ ಪ್ರವಾಸೋದ್ಯಮ ಇಲಾಖೆಯ ವಾಹನಗಳಲ್ಲಿಯೇ ಕರೆದುಕೊಂಡು ಹೋಗುವಂತೆ ಸೂಚನೆಯನ್ನು ನೀಡಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖಾ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಬೇಕು.ಯಾವುದೇ ಕಾರಣಕ್ಕೂ ಅನಧೀಕೃತವಾಗಿ ಖಾಸಗಿ ಹಾಗೂ ಮಿನಿ ಬಸ್‌ಗಳಲ್ಲಿ ಪ್ರವಾಸವನ್ನು ಕೈಗೊಳ್ಳಬಾರದು.ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುಬೇಕು.