ವಿಧಾನಸೌಧ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಧಿವೇಶನದಲ್ಲಿ ಪಾಲ್ಗೊಂಡ ಶಾಸಕ NHK – ಉತ್ತರ ಕರ್ನಾಟಕದ ಶಕ್ತಿ ಸೌಧ ದಲ್ಲಿ ಆರಂಭಗೊಂಡಿತು ಚಳಿಗಾಲದ ಅಧಿವೇಶನ

Share to all

ವಿಧಾನಸೌಧ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಧಿವೇಶನದಲ್ಲಿ ಪಾಲ್ಗೊಂಡ ಶಾಸಕ NHK – ಉತ್ತರ ಕರ್ನಾಟಕದ ಶಕ್ತಿ ಸೌಧ ದಲ್ಲಿ ಆರಂಭಗೊಂಡಿತು ಚಳಿಗಾಲದ ಅಧಿವೇಶನ

ಬೆಳಗಾವಿ –

ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಂಡಿದೆ.ಹೌದು ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ಅಧಿವೇಶನ ಆರಂಭಗೊಂಡಿದ್ದು ಇನ್ನೂ ಈ ಒಂದು ಅಧಿವೇಶನದಲ್ಲಿ ನವಲಗುಂದ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರಡ್ಡಿ ಯವರು ಕೂಡಾ ಪಾಲ್ಗೊಂಡಿದ್ದಾರೆ.ಇನ್ನೂ ವಿಧಾನಸೌಧ ವನ್ನು ಪ್ರವೇಶ ಮಾಡುವ ಮುಂಚಿತವಾಗಿ ಶಾಸಕ ಎನ್ ಹೆಚ್ ಕೊನರೆಡ್ಡಿಯವರು ವಿಧಾನಸೌಧ ದ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗಡೆ ತೆರಳಿದರು.ಒಂದು ಕಡೆಗೆ ರಾಜ್ಯದಲ್ಲಿ ಹೊಸದಾಗಿ ಸರ್ಕಾರ ರಚನೆಯಾಗಿದ್ದು ಇನ್ನೂ ಕ್ಷೇತ್ರದಲ್ಲಿ ತಾವು ಕೂಡಾ ಎರಡನೇಯ ಬಾರಿಗೆ ಶಾಸಕರಾಗಿದ್ದು ಸಧ್ಯ ಬೆಳಗಾವಿಯ ಸುವರ್ಣ ಸೌಧ ದಲ್ಲಿ ಅಧಿವೇಶನ ಕೂಡಾ ನಡೆಯುತ್ತಿದ್ದು ಹೀಗಾಗಿ ನಡೆಯುತ್ತಿರುವ 16ನೇ ವಿಧಾನ‌ ಮಂಡಲದ ಮೊದಲನೇಯ ಚಳಿಗಾಲದ ಅಧಿವೇಶನಕ್ಕೆ ತೆರಳುವ ಸಂದರ್ಭದಲ್ಲಿ ಸುವರ್ಣ ವಿಧಾನ ಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳ ಪ್ರವೇಶಿಸಿದ್ದು ವಿಶೇಷವಾಗಿ ಕಂಡು ಬಂದಿತು.

ಉದಯ ವಾರ್ತೆ ಬೆಳಗಾವಿ


Share to all

You May Also Like

More From Author