Mlc ಬೆಂಬಲಿಗರಿಂದ ಬಿಜೆಪಿ ಮುಖಂಡನ ಮೇಲೆ ಚಾಕು ಇರಿತ.ಬಿಜೆಪಿ ಮುಖಂಡ ಪ್ರಥ್ವಿ ಸಿಂಗ್ ಆರೋಪ !!!
ಬೆಳಗಾವಿ:-ಬೆಳಗಾವಿ ಬಿಜೆಪಿ ಮುಖಂಡ ಪ್ರಥ್ವಿ ಸಿಂಗ್ ಮನೆಗೆ ನುಗ್ಗಿ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಬೆಂಬಲಿಗರು ಚಾಕು ಇರಿದು ಹೋಗಿದ್ದಾರೆ ಎಂದು ಬಿಜೆಪಿ ಮುಖಂಡ ಪ್ರಥ್ವಿ ಸಿಂಗ್ ಆರೋಪಿಸಿದ್ದಾರೆ.
ಪ್ರಥ್ವಿ ಸಿಂಗ್ ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತ ಎನ್ನಲಾಗಿದೆ. ಆತನ ಕೈ ಹಾಗೂ ಬೆನ್ನಿಗೆ ಚಾಕು ಹಾಕಿ ಪರಾರಿಯಾಗಿದ್ದಾರೆ.ಚನ್ನರಾಜ ಬೆಂಬಲಿಗರು ಎನ್ನಲಾದ ಸದ್ದಾಂ,ಸುಜಯ್,ಸೇರಿದಂತೆ ಹಲವರಿಂದ ಚಾಕು ಇರಿಯಲು ಬಂದು ಪ್ರಥ್ವಿ ಸಿಂಗ್ ಜೊತೆ ಮಾತನಾಡುತ್ತಿರುವ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಪ್ರಥ್ವಿ ಸಿಂಗ್ ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನನಗ ಬಹಳ ಹೊಡದಾರ ಬಿಜೆಪಿಯವರು ಮಾದ್ಯಮದವರು ಎಲ್ಲಾರು ಬರ್ರೀ ಎಂದು ಕೈ ಮುಗಿದು ಬೇಡಿಕೊಂಡ ಪ್ರಥ್ವಿ ಸಿಂಗ್ ಎಂಎಲ್ ಸಿ ಚನ್ನರಾಜ ಮೇಲೆ ಆರೋಪ ಮಾಡಿದ್ದಾರೆ.
ಈಗಾಗಲೇ ಬೆಳಗಾವಿ ಕೆಎಲ್ ಇ ಆಸ್ಪತ್ರೆಗೆ ಬಿಜೆಪಿ ಮುಖಂಡರು ಭೇಟಿ ನೀಡಿ ಪ್ರಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ.
ಉದಯ ವಾರ್ತೆ ಬೆಳಗಾವಿ