!!!ಆರು ವರ್ಷದ ಪ್ರೀತಿಗೆ ಅಡ್ಡ ಬಂದ ಜಾತಿ.ಸಂಘಟನೆಯೊಂದರ ಸಹಾಯದಿಂದ ಮದುವೆ.ಒಂದಾದ ಲವ್ ಬಡ್ಸ್೯.!!!
ಧಾರವಾಡ:- ಹೌದು ಧಾರವಾಡದಲ್ಲಿ ವಿವಾಹವಾಗಿದ್ದ ಇಬ್ಬರು ಪ್ರೇಮಿಗಳನ್ನು ರಾಜಕೀಯ ಒತ್ತಡಕ್ಕೆ ಮಣಿದು ಧಾರವಾಡ ಗ್ರಾಮೀಣ ಪೋಲೀಸರು ಪ್ರೇಮಿಗಳಿಬ್ಬರನ್ನು ಬೇರೆ ಬೇರೆ ಮಾಡಿದ್ದಾರೆ ಎಂದು ತಿಳಿದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಪೋಲೀಸ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.
ಸಂಘಟನೆಯವರು ಪ್ರತಿಭಟನೆಗೆ ಮಣಿದ ಪೋಲೀಸರು ತಕ್ಷಣ ಪ್ರೇಮಿಗಳಿಬ್ಬರನ್ನು ಒಂದು ಮಾಡಿ ಕಳಿಸಿದ ಘಟನೆ ನಡೆಯಿತು.
ಆರು ವರ್ಷದಿಂದ ಪ್ರೀತಿಸಿ ಮದುವೆಯಾದ ಜೋಡಿಯನ್ನು ರಾಜಕೀಯ ಒತ್ತಡದಿಂದ ಸಿಪಿಆಯ್ ಕಮತಗಿ ಅವರು ಹುಡುಗಿಯನ್ನು ಸಾಂತ್ವನ ಕೇಂದ್ರಕ್ಕೆ ಕಳೆಯಿಸಿ,ಹುಡುಗನ ತಾಯಿ ಮತ್ತು ಹುಡುಗನ ಗೆಳೆಯನನ್ನು ಕರೆಯಿಸಿ ಹೊಡೆದು ಬೆದರಿಕೆ ಹಾಕಿದ್ದಾರೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.
ಅಲ್ಲದೇ ಇಬ್ಬರೂ ಮೇಜರ್ ಆಗಿರುವುದರಿಂದ ಅವರನ್ನು ಭೇರ್ಪಡಿಸುವ ಅಧಿಕಾರ ಪೋಲೀಸರಿಗೆ ಕೊಟ್ಟಿದ್ದಾದರೂ ಯಾರು ಎಂದ ಪ್ರಶ್ನೆ ಮಾಡಿದ ಸಂಘಟನೆಯ ಮುಖಂಡರು ಪೋಲೀಸರ ನಡೆಯನ್ನು ಖಂಡಿಸಿದ್ದಾರೆ.
ಉದಯ ವಾರ್ತೆ ಧಾರವಾಡ.