ಮೊದಲ ಬಾರಿಗೆ ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರ ಮನೆಯ ಮೇಲೆ ಲೋಕಾಯುಕ್ತ ದಾಳಿ. ಏಕಕಾಲದಲ್ಲಿ 10 ಕಡೆಗಳಲ್ಲಿ ದಾಳಿ ಪರಿಶೀಲನೆ ಮಾಡುತ್ತಿರುವ ಲೋಕಾ ಟೀಮ್.
ಮೈಸೂರು –
ಅಕ್ರಮವಾಗಿ ಆಸ್ತಿ ಸಂಪಾದನೆ ಆರೋಪ ಮತ್ತು ದೂರಿನ ಹಿನ್ನಲೆಯಲ್ಲಿ ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರ ನಿವಾಸದ ಮೇಲೆ ಲೋಕಾಯುಕ್ತ ದಾಳಿಯಾಗಿದೆ.ಹೌದು ಮೈಸೂರಿನಲ್ಲಿ ಈ ಒಂದು ಲೋಕಾಯುಕ್ತ ದಾಳಿಯಾಗಿದ್ದು ಸರ್ಕಾರಿ ಕಾಲೇಜಿನ ಮಹದೇವಸ್ವಾಮಿ ಎಂಬುವರ ಮನೆಯ ಮೇಲೆ ಲೋಕಾ ಪೊಲೀಸರು ದಾಳಿ ಮಾಡಿದ್ದಾರೆ.ನಂಜನಗೂಡು ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಇವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪ ಮತ್ತು ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ಈ ಒಂದು ದಾಳಿಯನ್ನು ಮಾಡಿದ್ದಾರೆ.ಮೈಸೂರಿನ ಜೆಪಿ ನಗರದ ಗುರುಕುಲ ಬಡಾವಣೆಯಲ್ಲಿರುವ ಮನೆ ಮೇಲೆ ದಾಳಿಯಾಗಿದೆ.ಲೆಕ್ಚರರ್ ಮಹದೇವಸ್ವಾಮಿ ಮನೆ ಮೇಲೆ ದಾಳಿಯಾಗಿದ್ದು ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.ಲೆಕ್ಚರರ್ ಮಹದೇವಸ್ವಾಮಿಗೆ ಸೇರಿದ 10 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಶೋಧವನ್ನು ಮಾಡುತ್ತಿದ್ದಾರೆ.ಮೈಸೂರು ನಗರದಲ್ಲೇ 7 ಕಡೆಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದ್ದು ನಂಜನಗೂಡು ಹಾಗೂ ಇತರ ಕಡೆ ಸೇರಿ ಒಟ್ಟು 10 ಕಡೆಗಳಲ್ಲಿ ಲೆಕ್ಕಪತ್ರವನ್ನು ಲೋಕಾ ಪೊಲೀಸರು ತಪಾಸಣೆಯನ್ನು ಮಾಡುತ್ತಿದ್ದಾರೆ.ಸಧ್ಯ ಕೆಲವೊಂದಿಷ್ಟು ಮಹತ್ವದ ದಾಖಲೆಗಳನ್ನು ವಶಕ್ಕೆ ತಗೆದುಕೊಂಡಿರುವ ಲೋಕಾ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಉದಯ ವಾರ್ತೆ ಮೈಸೂರು.